200ಮೀ.ಓಟ: ಜಮೈಕಾಕ್ಕೆ ಮತ್ತೊಂದು ಚಿನ್ನ ಜಮೆ

ಗುರುವಾರ, 21 ಆಗಸ್ಟ್ 2008 (20:02 IST)
ಒಲಿಂಪಿಕ್ ಕ್ರೀಡಾಕೂಟದಲ್ಲಿ ಜಮೈಕಾ ಪದಕಗಳ ಬೇಟೆಯನ್ನು ಮುಂದುವರಿಸಿದ್ದು,ಗುರುವಾರ ನಡೆದ 200ಮೀಟರ್ ಮಹಿಳೆಯರ ಓಟದಲ್ಲಿ ವೆರೋನಿಕಾ ಕ್ಯಾಂಪ್‌ ಬೆಲ್ ಬ್ರೌನ್ ಗೆಲುವು ಸಾಧಿಸುವ ಮೂಲಕ ಸ್ವರ್ಣ ಪದಕವನ್ನು ಗಳಿಸಿದ್ದಾರೆ.

ಕ್ಯಾಂಪ್ ಬೆಲ್ ಬ್ರೌನ್ 200ಮೀ.ಓಟವನ್ನು 21.74ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದು,ಅಮೆರಿಕದ ಪ್ಲೆಕ್ಸ್ 21.93ಸೆಕೆಂಡ್ಸ್‌ನಲ್ಲಿ ಗಮ್ಯ ತಲುಪಿ ಬೆಳ್ಳಿ ಪದಕ ಪಡೆದರೆ,ಜಮೈಕಾದ ಕೆರ್ರೊನ್ ಸ್ಟೀವಾರ್ಟ್ 22.00ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಕಂಚಿಗೆ ತೃಪ್ತಿಪಟ್ಟುಕೊಂಡರು.

ಈಗಾಗಲೇ ಜಮೈಕಾದ ಉಸೇನ್ ಬೋಲ್ಟ್ 100ಮೀ.ಮತ್ತು 200ಮೀ.ಪುರುಷರ ಓಟದಲ್ಲಿ ಸ್ವರ್ಣ ಪದಕ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ