ಟೋಕಿಯೊ ಒಲಿಂಪಿಕ್ಸ್ 6ನೇ ದಿನ: ಮೇರಿಗೆ ಆಘಾತ; ಪದಕದತ್ತ ಸಿಂಧು, ಅತನು ದಾಪುಗಾಲು

ಗುರುವಾರ, 29 ಜುಲೈ 2021 (18:16 IST)
ಈ ಮೂಲಕ ಟೋಕಿಯೊ ಒಲಿಂಪಿಕ್ಸ್ ನ 6ನೇ ದಿನವಾದ ಗುರುವಾರ ಭಾರತ ನಿರಾಸೆ ಮುಂದುವರಿದಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೊದಲ ದಿನವೇ ಬೆಳ್ಳಿ ಪದಕ ಗೆದ್ದ ಭಾರತ ನಂತರದ 5 ದಿನಗಳಲ್ಲಿ ಒಂದೂ ಪದಕ ಗೆಲ್ಲದೇ ನಿರಾಸೆ ಮೂಡಿಸಿದೆ. ಆರ್ಚರಿ, ಶೂಟಿಂಗ್, ವನಿತೆಯರ ಹಾಕಿ ಸೇರಿದಂತೆ ಹಲವು ವಿಭಾಗಗಳಲ್ಲಿ ಎಡವಿದೆ. ಆದರೆ ಪದಕದ ಭರವಸೆ ಮೂಡಿಸಿದ್ದ ಕೆಲವು ಸ್ಪರ್ಧಿಗಳು ತಮ್ಮ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.
ಗುರುವಾರ ನಡೆದ 59 ಕೆಜಿ ವಿಭಾಗದ ವನಿತೆಯರ ಸಿಂಗಲ್ಸ್ ನಲ್ಲಿ ಮೇರಿಕೋಮ್ 2-3 ಸೆಟ್ ಗಳಿಂದ 4 ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಇಂಗ್ರೆಟ್ ವಿಕ್ಟೋರಿಯಾ ವಿರುದ್ಧ ಆಘಾತ ಅನುಭವಿಸಿದರು.
ಆರ್ಚರಿ ರಿರ್ಕ್ಯೂ ವಿಭಾಗದಲ್ಲಿ ಭಾರತದ ಅತನು ದಾಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ 16ರ ಘಟ್ಟದ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಿನ್ ಯೆಕ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮುಂದಿನ ಪಂದ್ಯದಲ್ಲಿ ಜಪಾನ್ ನ ಟಕಹರು ಫುರುಕೊವಾ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ 6ನೇ ಶ್ರೇಯಾಂಕಿತೆ ಪಿವಿ ಸಿಂಧು 21-15, 21-13 ನೇರ ಸೆಟ್ ಗಳಿಂದ ಡೆನ್ಮಾರ್ಕ್ ನ ಮಿಯಾ ಬ್ಲಿಚ್ ಫ್ಲೆಡೆಟ್ ಅವರನ್ನು ಮಣಿಸಿದರು.
ಪುರುಷರ 91 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯ ಮೊದಲ ಸ್ಪರ್ಧೆಯಲ್ಲಿ ಸತೀಶ್ ಕುಮಾರ್ 4-1ರಿಂದ ಜಮೈಕಾದ ರಿಚಾರ್ಡೊ ಬ್ರೌನ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಪದಕ ಗೆಲ್ಲಲು ಕೇವಲ ಒಂದು ಹೆಜ್ಜೆ ಅಗತ್ಯವಿದೆ.
ಭಾರತ ಪುರುಷರ ಹಾಕಿ ತಂಡ 3-1 ಗೋಲುಗಳಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಬಗ್ಗುಬಡಿಯುವ ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ