ರಿಲೆಯಲ್ಲೂ 'ಬೋಲ್ಟ್' ವಿಶ್ವದಾಖಲೆ

ಶುಕ್ರವಾರ, 22 ಆಗಸ್ಟ್ 2008 (20:47 IST)
ವಿಶ್ವದ ವೇಗದ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಜಮೈಕಾದ ಉಸೇನ್ ಬೋಲ್ಟ್ ಶುಕ್ರವಾರವೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ 400 ಮೀ. ರಿಲೆಯಲ್ಲಿ ನಾಗಾಲೋಟದಲ್ಲಿ ಗುರಿ ತಲುಪುವ ಮೂಲಕ ಸ್ವರ್ಣ ಪದಕ ಗಳಿಸಿ ಮತ್ತೊಂದು ವಿಶ್ವ ದಾಖಲೆಯನ್ನು ನಿರ್ಮಿಸಿದ ಅಗ್ಗಳಿಕೆಗೆ ಭಾಜನರಾದರು.

ಈಗಾಗಲೇ ಒಲಿಂಪಿಕ್ ಗೇಮ್ಸ್‌ನಲ್ಲಿ ಚಿರತೆಯ ಓಟದ ಉಸೇನ್ ಬೋಲ್ಟ್ 100ಮೀ.ಮತ್ತು 200ಮೀ.ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದು,400ಮೀ.ರಿಲೆಯಲ್ಲೂ 3ನೇ ಬಂಗಾರದ ಬೇಟೆಯೊಂದಿಗೆ ವಿಶ್ವ ದಾಖಲೆ ಮಾಡಿದರು.

ಜಮೈಕಾ ರಿಲೆ ತಂಡದಲ್ಲಿ ಬೋಲ್ಟ್ ಸೇರಿದಂತೆ ನೆಸ್ತಾ ಕಾರ್ಟರ್,ಮೈಕಲ್ ಫ್ರಾಟೆರ್ ಮತ್ತು ಅಸಾಫಾ ಪೋವೆಲ್ 37.10ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪುವ ಮೂಲಕ 1993ರಲ್ಲಿ ಅಮೆರಿಕ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು.

ಟ್ರಿನಿಡಾಡ್ ಮತ್ತು ಟೋಬಾಗೋ 38.06ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪುವ ಮೂಲಕ ದ್ವಿತೀಯ ಸ್ಥಾನ ಪಡೆದರೆ,ಜಪಾನ್ 38.15ಸೆಕೆಂಡ್ಸ್‌ಗಳಲ್ಲಿ ಗಮ್ಯ ತಲುಪಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ವೆಬ್ದುನಿಯಾವನ್ನು ಓದಿ