ಜಸ್‌ಪಾಲ್ ರಾಣಾ

ಶೂಟಿಂಗ್ ಸ್ಪರ್ಧೆಯಲ್ಲಿ ಜಸ್‌ಪಾಲ್ ರಾಣಾ ಅವರದು ದೊಡ್ಡ ಹೆಸರು. ಉತ್ತರಪ್ರದೇಶದ ಉತ್ತರ ಕಾಶಿಯಲ್ಲಿ 1976ಜೂನ್ 28ರಂದು ಜನಿಸಿದರು. ನಂತರ ದೆಹಲಿಯ ಕೆ. ವಿ ಏರ್‌ಫೋರ್ಸ್ ಶಾಲೆಯಲ್ಲಿ ತಮ್ಮ ಅಭ್ಯಾಸವನ್ನು ಮುಂದುವರೆಸಿದರು.

ತಂದೆಯ ಮಾರ್ಗದರ್ಶನದ ಮೇರೆಗೆ ತರಬೇತುದಾರ ಸನ್ನಿ ಥಾಮಸ್ ಅವರಲ್ಲಿ ಶೂಟಿಂಗ್‌ ತರಬೇತಿಯನ್ನು ಮುಂದುವರೆಸಿದರು. ಇಲ್ಲಿಯವರೆಗೆ ದೇಶಿಯ, ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ 600 ಮೆಡಲ್‌ಗಳನ್ನು ಸಂಪಾದಿಸಿದ್ದಾರೆ.

1994ರಲ್ಲಿ ಕೇಂದ್ರ ಸರಕಾರ ಅವರ ಅಮೋಘ ಸೇವೆಯನ್ನು ಕಂಡು ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಿತು. 1987ರಲ್ಲಿ ತಮ್ಮ ಶೂಟಿಂಗ್ ಜೀವನವನ್ನು ಆರಂಭಿಸಿದ ಜಸ್‌ಪಾಲ್ ರಾಣಾ ತಮ್ಮ 12ನೇ ವಯಸ್ಸಿನಲ್ಲಿ 31ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಪಡೆದರು. ನಂತರ ಕ್ರಮವಾಗಿ ಬಂಗಾರ, ಕಂಚು ಪದಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

1992 ಮತ್ತು 1994ರಲ್ಲಿ ಮುಂಗೇರ್ ಮತ್ತು ಕಾನ್‌ಪುರ್‌ಗಳಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ 8 ಬಂಗಾರದ ಪದಕಗಳನ್ನು ಪಡೆದು ಇತಿಹಾಸ ಸೃಷ್ಟಿಸಿದರು. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಉತ್ತಮ ಕ್ರೀಡಾಪಟು ಎಂದು ಘೋಷಿಸಲ್ಪಟ್ಟರು.

ವೆಬ್ದುನಿಯಾವನ್ನು ಓದಿ