ಬೈಚುಂಗ್ ಭೂಟಿಯಾ

ಸಿಕ್ಕಿಂ ರಾಜ್ಯದ ದಕ್ಷಿಣ ಸಿಕ್ಕಿಂ ಜಿಲ್ಲೆಯಲ್ಲಿ 1976 ಡಿಸೆಂಬರ್ 15ರಂದು ಜನಿಸಿದರು.ತಮ್ಮ 16 ನೇ ವರ್ಷದಲ್ಲಿ(1993) ಕೋಲ್ಕತ್ತಾದಲ್ಲಿರುವ ಈಸ್ಟ್ ಬೆಂಗಾಲ್ ಕ್ಲಬ್ ತಂಡವನ್ನು ಸೇರಿಕೊಂಡರು.

ನಂತರ ರಾಷ್ಟ್ರೀಯ ತಂಡಕ್ಕೆ ಸೇರಿಕೊಂಡ ಭೂಟಿಯಾ 1996ರಲ್ಲಿ ಭಾರತದ ವರ್ಷದ ಆಟಗಾರ ಪ್ರಶಸ್ತಿಗೆ ಪಾತ್ರರಾದರು.1998-99ರಲ್ಲಿ ಈಸ್ಟ್ ಬೆಂಗಾಲ್ ಕ್ಲಬ್ ತಂಡದ ನಾಯಕರಾಗಿ ಆಯ್ಕೆಯಾದರು.2002ರಲ್ಲಿ ಮೋಹನ್ ಬಗಾನ್ ತಂಡವನ್ನು ಸೇರಿಕೊಂಡರು.ಒಂದು ವರ್ಷದ ನಂತರ ಮರಳಿ ಈಸ್ಟ್ ಬೆಂಗಾಲ್ ಕ್ಲಬ್ ತಂಡವನ್ನು ಸೇರಿಕೊಂಡು ಏಷಿಯಾ ಕಪ್ ಪಂದ್ಯಾವಳಿಯಲ್ಲಿ ತಂಡ ಗೆಲ್ಲಲು ನೆರವಾದರು.

ಕೆಲಕಾಲ ಮಲೇಷೀಯಾ ಕ್ಲಬ್ ತಂಡದಲ್ಲಿ ಫಾರ್ವರ್ಡ್ ಆಟಗಾರನಾಗಿ ಸೇವೆ ಸಲ್ಲಿಸಿದರು. ನಂತರ ಆದಿದಾಸ್ ನೊಂದಿಗೆ ಒಪ್ಪಂದ ಮಾಡಿಕೊಂಡು ಜಾಹೀರಾತು ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು ಪ್ರಸ್ತುತ ನೈಕ್ ಸಂಸ್ಥೆಯೊಂದಿಗೆ ಒಪ್ಪಂದದಲ್ಲಿ ತೊಡಗಿಸಿಕೊಂಡಿದ್ದಾರೆ.

2004 ಡಿಸೆಂಬರ್ 27ರಲ್ಲಿ ತಮ್ಮ ಬಹುಕಾಲದ ಗೆಳತಿ ಮಾಧುರಿ ಟಿಪ್ನಿಸ್ ಅವರನ್ನು ವಿವಾಹವಾಗಿದ್ದಾರೆ. ಸಿಕ್ಕಿಂ ಸರಕಾರ ನಮಾಚಿಯಲ್ಲಿ ಬೈಚುಂಗ್ ಹೆಸರಿನ ಕ್ರೀಡಾಂಗಣವನ್ನು ನಿರ್ಮಿಸಿದೆ. ಸಿಕ್ಕಿಂ ಫುಟ್ಬಾಲ್ ಪ್ರಿಯರಿಗೆ ಮಾದರಿಯಾಗಿದ್ದು ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ತಮ್ಮ ಆಟದಿಂದ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ