ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ

ಬುಧವಾರ, 3 ಫೆಬ್ರವರಿ 2016 (09:33 IST)
ಭಾರತ ಹಾಕಿ ತಂಡದ ನಾಯಕ ಸರ್ದಾರ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ. ಸರ್ದಾರ್‌ ಸಿಂಗ್ ಬಹುಕಾಲದ ಗೆಳತಿ ಲೂಧಿಯಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಸಿಂಗ್ ತನಗೆ ಮಾನಸಿಕ, ದೈಹಿಕ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. 
 
ಕಳೆದ ನಾಲ್ಕು ವರ್ಷಗಳ ಹಿಂದೆ 2012 ಲಂಡನ್ ಒಲಿಂಪಿಕ್ಸ್‌‌ನಲ್ಲಿ ನಮ್ಮಿಬ್ಬರ ಪರಿಚಯವಾಗಿತ್ತು.  ಪರಸ್ಪರ ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡಿದ್ದೆವು. ಕಳೆದ ನಾಲ್ಕು ವರ್ಷಗಳಿಂದ ನಾನು ಆತನ ಜತೆ ವಾಸಿಸುತ್ತಿದ್ದೆ. ಆತ ತನ್ನೊಂದಿಗೆ ದೈಹಿಕ ಸಂಬಂಧವನ್ನು ಕೂಡ ಬೆಳೆಸಿದ್ದಾನೆ ಎಂದು ಲಂಡನ್ ಹಾಕಿ ತಂಡದ ಆಟಗಾರ್ತಿಯಾಗಿರುವ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. 
 
ತಾನು ಗರ್ಭಿಣಿಯಾಗಿರುವುದಾಗಿ ಸರ್ದಾರ್ ಸಿಂಗ್ ಅವರಿಗೆ ಹೇಳಿದಾಗ ಗರ್ಭಪಾತ ಮಾಡಿಸಲು ಹೇಳಿದ್ದಾರೆ. ಅದನ್ನು ನಾನು ತಳ್ಳಿ ಹಾಕಿದೆ. ಆಗಿನಿಂದ ಸರ್ದಾರ್‌ ಸಿಂಗ್‌ ತನಗೆ ಮಾನಸಿಕ, ದೈಹಿಕ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ.  ಜತೆಗೆ ಕಳೆದ ಮೂರು ತಿಂಗಳಿಂದ ನನ್ನ ಫೋನ್ ಕರೆಯನ್ನು ಸಹ ಸ್ವೀಕರಿಸುತ್ತಿಲ್ಲ  ಎಂದು ಮಹಿಳೆ ಆರೋಪಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ