ಧನರಾಜ ಪಿಳ್ಳೆ

ದೇಶದ ಖ್ಯಾತ ಹಾಕಿ ಆಟಗಾರ ಧನರಾಜ ಪಿಳ್ಳೆ 1968ರಲ್ಲಿ ಮಹಾರಾಷ್ಟ್ರದ ಕಿರ್ಕಿಯಲ್ಲಿ ಜನಿಸಿದರು.ತನ್ನ ಹಿರಿಯಣ್ಣ ಹಾಕಿ ಆಟದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ಪ್ರತಿನಿಧಿಸಿದ್ದರು.

ಮಹಿಂದ್ರಾ ಆಂಡ್ ಮಹಿಂದ್ರಾ ತನ್ನ ಸಿಬ್ಬಂದಿಯಲ್ಲಿರುವ ಪ್ರತಿಭಾವಂತ ಆಟಗಾರರನ್ನು 1989ರಲ್ಲಿ ನಡೆದ ಏಷಿಯಾ ಕಪ್ ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು. 15 ವರ್ಷಗಳ ನಿರಂತರ ಹಾಕಿ ಆಟಗಳಲ್ಲಿ ನಾಲ್ಕು ಬಾರಿ ಓಲಿಂಪಿಕ್(92,96, 2000,2004), ನಾಲ್ಕು ವಿಶ್ವಕಪ್, ನಾಲ್ಕು ಚಾಂಪಿಯನ್ ಷಿಪ್, ನಾಲ್ಕು ಏಷಿಯನ್ ಗೇಮ್ಸ್, ನಾಲ್ಕು ಏಷಿಯಾ ಕಪ್ ಪಂದ್ಯಗಳಲ್ಲಿ ಸಾಧನೆ ಮಾಡಿದರು.

ಬ್ಯಾಂಕಾಕ್ ನಲ್ಲಿ ನಡೆದ ಏಷಿಯಾ ಗೇಮ್ಸ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಹೊಡೆದ ಆಟಗಾರನೆಂಬ ಬಿರುದಿಗೆ ಪಾತ್ರರಾದರು.ಹಾಕಿ ಆಟದಲ್ಲಿ ಮಾಡಿದ ಸಾಧನೆಗೆ 1999ರಲ್ಲಿ ಭಾರತದ ಕೇಂದ್ರ ಸರಕಾರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ,2000 ವರ್ಷದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

ವೆಬ್ದುನಿಯಾವನ್ನು ಓದಿ