ವಿಜಯ್ ಅಮೃತ್‌ರಾಜ್

ತಮಿಳುನಾಡಿನ ಚನ್ನೈಯಲ್ಲಿ 1953 ಡಿಸೆಂಬರ್ 14 ರಂದು ಜನಿಸಿದರು. 1970 ರಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಪ್ರಥಮವಾಗಿ ಟೆನಿಸ್ ಆಟಕ್ಕೆ ತಮ್ಮ ಗಮನವನ್ನು ಹರಿಸಿದರು.

1973ರಲ್ಲಿ ಸಿಂಗಲ್ಸ್ ಪಂದ್ಯಗಳಲ್ಲಿ ಸತತ ಜಯಭೇರಿ ಭಾರಿಸಿದರು. ಗ್ರ್ಯಾಂಡ್‌ಸ್ಲ್ಯಾಮ್ ಹಾಗೂ ವಿಂಬಲ್ಡನ್ ಪಂದ್ಯಗಳ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಪಾಲ್ಗೊಂಡು ಇಲ್ಲಿಯವರೆಗೆ ಯಾವುದೇ ಭಾರತೀಯ ಈ ಸಾಧನೆ ಮಾಡಿರಲಿಲ್ಲ. 1970ರಲ್ಲಿ ಡೇವಿಸ್ ಕಪ್ ತಂಡದ ನಾಯಕರಾಗಿದ್ದರು.1974 ಹಾಗೂ 1987 ರಲ್ಲಿ ಭಾರತವು ಫೈನಲ್ ತಲುಪುವಲ್ಲಿ ತಮ್ಮ ಸಾಧನೆ ತೋರಿ ,

ಜಗತ್ತಿನ ಅನೇಕ ಖ್ಯಾತನಾಮರೊಂದಿಗೆ ಟೆನಿಸ್ ರಂಗದಲ್ಲಿ ಸೋಲು ಗೆಲುವನ್ನು ಕಂಡಿದ್ದರು.ಆಟವಲ್ಲದೇ ಹಾಲಿವುಡ್ ಚಿತ್ರರಂಗದ ಜೇಮ್ಸ್‌ಬಾಂಡ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರು.ನಂತರ ಟೆನಿಸ್ ಆಟದ ವಿವರಣಾಕಾರರಾಗಿ ಮತ್ತು ಮಿಸ್ ಯುನಿವರ್ಸ್ ಆಯ್ಕೆ ತಂಡದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ