ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ ಮುಂಬಯಿನಲ್ಲಿ 1986ರ ನವೆಂಬರ್ 15 ರಂದು ಜನಿಸಿದ ನಂತರ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಹೈದ್ರಾಬಾದ್ ನಗರದಲ್ಲಿ ಬಂದು ನೆಲೆಸಿದರು.

ಸಾನಿಯಾ ಕೇವಲ ಆರು ವರ್ಷ ವಯಸ್ಸಿನಲ್ಲಿ ಟೆನಿಸ್ ಆಡಲು ಪ್ರಾರಂಭಿಸಿದ್ದಳು. ಸಾನಿಯಾಗೆ ಮಾರ್ಗದರ್ಶಕರಾಗಿ ಅವರ ತಂದೆ ತರಬೇತಿ ನೀಡುತ್ತಿದ್ದರು. 2003ರಲ್ಲಿ ಟೆನಿಸ್ ಆಟವನ್ನು ತನ್ನ ವೃತ್ತಿಯನ್ನಾಗಿ ಮಾಡಿಕೊಂಡು ಟೆನಿಸ್ ಪಂದ್ಯಗಳನ್ನು ಆಡಲು ಆರಂಭಿಸಿದರು. ಇಲ್ಲಿಯವರೆಗೆ ಯಾವುದೇ ಭಾರತೀಯ ಮಹಿಳೆ ಮಾಡದಂತಹ ಸಾಧನೆಯನ್ನು ಸಾನಿಯಾ ಮಾಡುವ ಮೂಲಕ , ಮಹಿಳಾ ಟೆನಿಸ್ ರಂಗದಲ್ಲಿ ಅಗ್ರ ಸ್ಥಾನವನ್ನು ತಲುಪಿದ್ದಾಳೆ.

ಸಾನಿಯಾ ಸಿಂಗಲ್ಸ್ ಪಂದ್ಯಗಳಲ್ಲಿ 48 ನೇ ಶ್ರೇಯಾಂಕವನ್ನು ಹೊಂದಿದ್ದು, ಡಬಲ್ಸ್ ಪಂದ್ಯಗಳಲ್ಲಿ 38 ನೇಶ್ರೇಯಾಂಕವನ್ನು ಹೊಂದಿದ್ದಾಳೆ. 2006 ರಲ್ಲಿ ನಡೆದ ಏಷ್ಯಾ ಗೇಮ್ಸ್ ಡಬಲ್ಸ್ ಪಂದ್ಯದಲ್ಲಿ ಭಾರತಕ್ಕೆ ಬಂಗಾರದ ಪದಕ ದೊರಕುವಂತೆ ಮಾಡಿದರು. ಬೆಂಗಳೂರಿನಲ್ಲಿ ನಡೆದ ಡಬಲ್ಸ್ ಪಂದ್ಯದಲ್ಲಿ ಗೆಲವು, ಕತಾರ್ ಏಷ್ಯಾ ಗೇಮ್ಸ್ ಪಂದ್ಯದಲ್ಲಿ ಗೆಲವು, ಭಾರತಕ್ಕೆ ಡಬ್ಲುಟಿಎ ಸಿಂಗಲ್ಸ್ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೈದ್ರಾಬಾದ್ ಓಪನ್ ಪಂದ್ಯಾವಳಿಯಲ್ಲಿ ಗೆಲುವು, ಅಫ್ರೋ ಏಷಿಯನ್ ಪಂದ್ಯಾವಳಿಯಲ್ಲಿ ನಾಲ್ಕು ಬಂಗಾರದ ಪದಕ ಪಡೆದು ಭಾರತಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ