ಬೆಂಗಳೂರು: ಮನೆಯಲ್ಲಿ ಬಾಳೆ ಹಣ್ಣು ತಿಂದರೂ ಮುಗಿಯದಷ್ಟಿದೆ ಎಂದರೆ ಹಲ್ವಾ, ಪಾಯಸ ಮಾಡಿ ಮುಗಿಸುವುದು ಸಾಮಾನ್ಯ. ಇನ್ನೂ ಒಂದು ರೀತಿ ಮಾಡಬಹುದು. ಬಾಳೆ ಹಣ್ಣನ್ನು ಒಣಗಿಸಿ ಶೇಖರಿಸುವ ಪದ್ಧತಿ ಹಳ್ಳಿ ಮನೆಗಳಲ್ಲಿವೆ. ಅದು ಹೇಗೆ ಎಂದು ನೋಡೋಣ.
ಬೇಕಾಗುವ ಸಾಮಗ್ರಿಗಳು
ಬಾಳೆ ಹಣ್ಣು
ಸಕ್ಕರೆ
ಮಾಡುವ ವಿಧಾನ
ಚೆನ್ನಾಗಿ ಹಣ್ಣಾದ ಬಾಳೆ ಹಣ್ಣನ್ನು ಸಿಪ್ಪೆ ಸುಲಿದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿಕೊಳ್ಳಿ. ಇದನ್ನು ತಟ್ಟೆ ಮೇಲೆ ಹರಡಿ ಮೇಲಿಂದ ಸುರಿಯಿರಿ. ಸಕ್ಕರೆ ಹೆಚ್ಚು ಬೇಡ. ಬಾಳೆ ಹಣ್ಣು ಸಿಹಿಯಾಗಿದ್ದರೆ ಸಕ್ಕರೆ ಇಲ್ಲದಿದ್ದರೂ ನಡೆಯುತ್ತದೆ. ಅದನ್ನು ಬಿಸಿಲಿಗೆ ನಾಲ್ಕೈದು ದಿನ ಒಣಗಿಸಿ. ಒಣಗಿದ ಮೇಲೆ ಶೇಖರಿಸಿಟ್ಟರೆ, ಯಾವಾಗ ಬೇಕಾದರೂ ತಿನ್ನಬಹುದು. ಇದು ಒಣಗಿದ ಮೇಲೆ ಚಾಕಲೇಟ್ ನಂತೆ ತಿನ್ನಲು ರುಚಿಯಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ