ರುಚಿಕರ ಬಾಳೆದಿಂಡಿನ ದೋಸೆ ಮಾಡುವ ವಿಧಾನ

ಶನಿವಾರ, 7 ಜನವರಿ 2017 (09:06 IST)
ಬೆಂಗಳೂರು: ಬಾಳೆ ದಿಂಡು ಆರೋಗ್ಯಕ್ಕೆ ಉತ್ತಮವಾದ ತರಕಾರಿ. ಇದರಲ್ಲಿ ನಾರಿನಂಶ ಹೆಚ್ಚು. ಇದರ ಪಲ್ಯ ಮಾಡಿ ತಿನ್ನಲು ಇಷ್ಟವಿಲ್ಲದಿದ್ದರೆ, ದೋಸೆ ಮಾಡಿ ತಿನ್ನಬಹುದು. ಮಾಡುವ ವಿಧಾನ ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ದೋಸೆ ಅಕ್ಕಿ
ಬಾಳೆ ದಿಂಡು
ಉಪ್ಪು

ಮಾಡುವ ವಿಧಾನ

ಬಾಳೆ ದಿಂಡನ್ನು ಹೆಚ್ಚಿಕೊಳ್ಳಿ. ನೆನೆ ಹಾಕಿದ  ಅಕ್ಕಿಯನ್ನು ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಬಾಳೆ ದಿಂಡಿನ ಚೂರುಗಳನ್ನು ಹಾಕಿ ಮತ್ತಷ್ಟು ರುಬ್ಬಿ. ಹಿಟ್ಟಿನಲ್ಲಿ ಬಾಳೆ ದಿಂಡಿನ ನಾರು ಕೈಗೆ ಸಿಕ್ಕುವಂತಿದ್ದರೆ, ಕೈಯಾಡಿಸಿ ತೆಗೆಯಿರಿ. ರೆಡಿಯಾದ ಹಿಟ್ಟನ್ನು ಕಾದ ಕಾವಲಿ ಮೇಲೆ ಹುಯ್ದರೆ ಬಾಳೆ ದಿಂಡಿನ ದೋಸೆ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ