ಬಾಳೆ ದಿಂಡಿನ ಜ್ಯೂಸ್ ತಯಾರಿಸುವುದು ಹೀಗೆ

ಬುಧವಾರ, 21 ಡಿಸೆಂಬರ್ 2016 (12:16 IST)
ಬೆಂಗಳೂರು; ಬಾಳೆ ದಿಂಡಿನ ಉಪಯೋಗದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಅದರ ಜ್ಯೂಸ್ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು

ಬಾಳೆ ದಿಂಡು
ಬೆಲ್ಲ
ಜೇನು ತುಪ್ಪ
ಏಲಕ್ಕಿ ಪುಡಿ
ನೀರು

ಮಾಡುವ ವಿಧಾನ

ಬಾಳೆ ದಿಂಡನ್ನು ಬಿಲ್ಲೆಗಳಾಗಿ ಕತ್ತರಿಸಿ. ಇದನ್ನು ನೀರು ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ಇದರ ನಾರು ಅಂಶ ಬೇರ್ಪಡಿಸಿ ರಸ ಸಂಗ್ರಹಿಸಿಟ್ಟುಕೊಳ್ಳಿ. ಇದಕ್ಕೆ ಬೆಲ್ಲ, ಜೇನು ತುಪ್ಪ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಕಿ. ಈಗ ರುಚಿಯಾದ ಬಾಳೆದಿಂಡಿನ ಜ್ಯೂಸ್ ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ