ಪ್ರೋಟೀನ್, ಫಾಸ್ಪರಸ್, ಜಿಂಕ್, ಮ್ಯಾಂಗನೀಸ್, ಮ್ಯಾಗ್ನೇಷಿಯಂ, ಪೊಟ್ಯಾಷಿಯಂ, ಕಬ್ಬಿಣ, ಜೀವಸತ್ವ ಬಿ6, ತಾಮ್ರ ಹಾಗೂ ನಾರಿನ ಹೇರಳವಾದ ಅಂಶಗಳನ್ನು ಹೊಂದಿರುವ ಬೀಟ್‌ರೂಟ್‌ನಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. ಇಂತಹ ಬೀಟ್‌ರೂಟ್ ಬಳಸಿ ಸುಲಭವಾಗಿ ಹಾಗು ರುಚಿಕರ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ
ಎಣ್ಣೆ
ಕರಿಬೇವು
ಮಾಡುವ ವಿಧಾನ:
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.
* ನಂತರ ಟೊಮೆಟೊ ಮತ್ತು ಬೀಟ್‌ರೂಟ್ ಹಾಕಿ ಅದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಅರಿಶಿಣಪುಡಿ, ಹಸಿರುಮೆಣಸಿನಕಾಯಿ, ಹುಣಸೆಹುಳಿ ಹಾಕಿ ಮಿಶ್ರಣ ಮಾಡಿ.
* 10 ನಿಮಿಷ ಹುರಿದ ನಂತರ ತುರಿದ ತೆಂಗಿನಕಾಯಿಯನ್ನು ಹಾಕಿ.
* ಈ ಎಲ್ಲ ಮಸಾಲೆಯನ್ನು ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
* ಒಂದು ಸಣ್ಣ ಪಾತ್ರೆಯಲ್ಲಿ 1 ಚಮಚ ಎಣ್ಣೆ, ಸಾಸಿವೆ, ಕರಿಬೇವು, ಜೀರಿಗೆ ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆಯನ್ನು ಹಾಕಿ.