ಮೊದಲು ಹಾಗಲಕಾಯಿಯನ್ನು ಕತ್ತರಿಸಿ 1 ಚಮಚ ಅರಿಶಿನ ಹಾಕಿದ ನೀರಿನಲ್ಲಿ 10 ನಿಮಿಷ ಹಾಕಬೇಕು. ನಂತರ ಒಂದು ಪ್ಯಾನ್‌ನಲ್ಲಿ ಕಡಿಮೆ ಉರಿಯಲ್ಲಿ ಒಣ ಮೆಣಸು, ಉದ್ದಿನ ಬೇಳೆ ಮತ್ತು ಗಸಗಸೆಯನ್ನು ಹುರಿದು ಬದಿಯಲ್ಲಿಡಬೇಕು. ನಂತರ ಈ ಎಲ್ಲಾ ಸಾಮಗ್ರಿಗಳನ್ನು ಹಾಕಿ, ತೆಂಗಿನ ತುರಿ ಸೇರಿಸಿ 1/4 ಕಪ್ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದರಲ್ಲಿ ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಎಲೆ ಹಾಕಿ 1 ರಿಂದ 2 ನಿಮಿಷ ಹುರಿದು ಹಾಗಲಕಾಯಿಯನ್ನು ಹಿಂಡಿ ಪಾತ್ರೆಗೆ ಹಾಕಬೇಕು.
ಅದನ್ನು 10 ನಿಮಿಷದವರೆಗೆ ಫ್ರೈ ಮಾಡಬೇಕು. ನಂತರ ಹುಣಸೆಹಣ್ಣಿನ ರಸ ಸೇರಿಸಿ 10 ನಿಮಿಷ ಬೇಯಿಸಬೇಕು. ಹಾಗಲಕಾಯಿ ಬೆಂದ ನಂತರ ರುಬ್ಬಿದ ಮಸಾಲೆಗೆ ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಚು ಉಪ್ಪನ್ನು ಸೇರಿಸಿ 5 ನಿಮಿಷ ಬೇಯಿಸಿದರೆ ಅನ್ನದ ಜೊತೆ ಸವಿಯಲು ರುಚಿರುಚಿಯಾದ ಹಾಗಲಕಾಯಿ ಗೊಜ್ಜು ರೆಡಿ..