ಫಟಾ ಪಟ್ ಚಾಕಲೇಟ್ ಕೇಕ್ ರೆಸಿಪಿ

ಭಾನುವಾರ, 11 ಜೂನ್ 2017 (10:06 IST)
ಬೆಂಗಳೂರು: ಕೇಕ್ ಮಾಡೋದು ಅಂದ್ರೆ ಸುಮ್ನೇನಾ? ಎಷ್ಟೊಂದು ಶ್ರಮ ಎಂದು ಉದಾಸೀನ ಮಾಡುವವರಿಗೆ ಐದೇ ನಿಮಿಷದಲ್ಲಿ ಚಾಕಲೇಟ್ ಕೇಕ್ ಮಾಡೋದು ಹೇಗೆ ಹೇಳುತ್ತೇವೆ ಕೇಳಿ.

 
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು
ಕೋಕಾ ಪೌಡರ್
ಉಪ್ಪು, ನೀರು
ಸಕ್ಕರೆ, ನಿಂಬೆ ರಸ
ಬೆಣ್ಣೆ, ಬೇಕಿಂಗ್ ಸೋಡಾ

ಮಾಡೋದು ಹೇಗೆ?
ಮೈದಾ ಹಿಟ್ಟಿಗೆ, ಕೋಕಾ ಪೌಡರ್ ಮತ್ತು ಉಪ್ಪು ಹಾಕಿ ಕಲಸಿಕೊಳ್ಳಿ. ಒಂದು ಕಪ್ ನೀರಿಗೆ ನಿಂಬೆ ರಸ ಮತ್ತು ಬೇಕಿಂಗ್ ಸೋಡಾ ಬೆರೆಸಿಡಿ. ಒಂದು ಬೌಲ್ ನಲ್ಲಿ ಮೈದಾ ಹಿಟ್ಟು, ಬೆಣ್ಣೆ ಮತ್ತು ಸಕ್ಕರೆಗೆ ನಿಂಬೆ ರಸ ಬೆರೆಸಿದ್ದ ಒಂದು ಕಪ್ ನೀರು ಸೇರಿಸಿ ಕಲಸಿಕೊಳ್ಳಿ. ಹಿಟ್ಟು ದಪ್ಪ ಎನಿಸಿದರೆ, ಎರಡರಿಂದ ಮೂರು ಚಮಚ ಬಿಸಿ ಹಾಲು ಸೇರಿಸಿ. ನಂತರ ಅದಕ್ಕೆ ಬೇಕಾದ ಆಕಾರ ಕೊಟ್ಟು ಓವನ್ ನಲ್ಲಿಡಿ. ಇದೀಗ ಪಟಾ ಪಟ್ ಚಾಕಲೇಟ್ ಕೇಕ್ ರೆಡಿ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ