ಉಡುಪಿ: ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ಚನ್ನಾ ಗಸಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ. ನೀವು ಕೂಡ ನಿಮ್ಮ ಮನೆಯಲ್ಲಿಯೇ ಮಾಡಿ ಸವಿಯಬಹುದು.
ಬೇಕಾಗುವ ಸಾಮಾಗ್ರಿ
2ದೊಡ್ಡ ಕಪ್ ತೆಂಗಿನ ಕಾಯಿ ಕಾಯಿ , 8 ಬ್ಯಾಡಗಿ ಮೆಣಸು. 1ಟೇಬಲ್ ಸ್ಪೂನ್ ಕೊತ್ತಂಬರಿ ಬೀಜ, 2ಟೀ ಸ್ಪೂನ್ ಜೀರಿಗೆ. ಅರ್ಧ ಟೀ ಸ್ಪೂನ್ ಮೆಂತೆ 3. ಈರುಳ್ಳಿ-1ಕಪ್ (ಕತ್ತರಿಸಿದ್ದು) 10 ಬೆಳ್ಳುಳಿ ಎಸಳು, ಅರ್ಧ ಚಮಚ ಅರಸಿನ , 1ದೊಡ್ಡ ಟೊಮೆಟೊ, 1ಪೀಸ್ ಚಕ್ಕೆ , 2ಲವಂಗ, ರುಚಿಗೆ ಉಪ್ಪು, ¼ ಕೆ.ಜಿ ನೆನೆದ ಕಾಬುಲ್ ಕಡ್ಲೆ, ಅರ್ಧ ಕಪ್ ಅಡಿಗೆ ಎಣ್ಣೆ , ಅರ್ಧ ಕಪ್ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ…
ಮೊದಲು ಕೊತ್ತಂಬರಿ ಬೀಜ. ಮೆಣಸು, ಜೀರಿಗೆ, ಮೆಂತೆ ಬೇರೆ ಬೇರೆಯಾಗಿ ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ಮಿಕ್ಸಿ ಅಥವಾ ಗ್ರೈಂಡರ್ ನಲ್ಲಿ ತೆಂಗಿನ ಕಾಯಿ, ಹುರಿದ ಸಾಮಾನು, ಬೆಳ್ಳುಳ್ಳಿ, ಹಚ್ಚಿಟ್ಟುಕೊಂಡ ಈರುಳ್ಳಿ ಯಲ್ಲಿ ಅರ್ಧ, ಕಪ್ ಹಾಕಿ ತುಂಬಾ ನುಣ್ಣಗೆ ಅರೆಯಿರಿ . ನಂತರ ಗ್ಯಾಸ್ ಹೊತ್ತಿಸಿ ಒಂದು ಬಾಣಲೆ ಇಡಿ. ಅದು ಬಿಸಿ ಯಾದ ಮೇಲೆ ಚಕ್ಕೆ, ಲವಂಗ ಹಾಕಿ ನಂತರ ಉಳಿದ ನೀರುಳ್ಳಿ ಹಾಕಿ ಗೋಲ್ಡನ್ ಕಲರ್ ಬರುವವರೆಗೂ ಫ್ರೈ ಮಾಡಿ ನಂತರ ಟೊಮೆಟೊ ಹಾಕಿ. ಅದು ತುಸು ಬೆಂದ ಕೂಡಲೇ ಕಾಬುಲಿ ಕಡ್ಲೆ, ಮಸಾಲೆ ಹಾಕಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ ಗ್ಯಾಸ್ ಆಫ್ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ ಪಾತ್ರೆಯನ್ನು ಮುಚ್ಚಿ.
ಎಸ್.ವಿ.ಶೆಟ್ಟಿ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ