ಕರಿಬೇವು ಸೊಪ್ಪಿನ ವಡೆ

ಮಂಗಳವಾರ, 20 ಡಿಸೆಂಬರ್ 2016 (12:17 IST)
ಬೆಂಗಳೂರು: ಕರಿಬೇವು ಸೊಪ್ಪು ಜಾಸ್ತಿಯಿದ್ದರೆ, ತುಂಬಾ ದಿನ ಮನೆಯಲ್ಲಿಟ್ಟುಕೊಂಡರೆ ಒಣಗಿ ಹಾಳಾಗುತ್ತದೆ ಎಂಬ ಚಿಂತೆ. ಇದಕ್ಕೆ ಕರಿಬೇವು ಸೊಪ್ಪಿನ ವಡೆ ಮಾಡಬಹುದು. ಹೇಗೆ ಮಾಡುವುದು ಕೆಳಗೆ ನೋಡಿ.

ಬೇಕಾಗುವ ಸಾಮಗ್ರಿಗಳು

ಕರಿಬೇವು ಸೊಪ್ಪು
ಕಡಲೆ ಹಿಟ್ಟು
ರವೆ
ಜೀರಿಗೆ
ಖಾರದ ಪುಡಿ
ಉಪ್ಪು
ಎಣ್ಣೆ

ಮಾಡುವ ವಿಧಾನ

ಕಡಲೆ ಹಿಟ್ಟು, ರವೆಗೆ ಹೆಚ್ಚಿದ ಕರಿಬೇವು ಸೊಪ್ಪು, ಖಾರದ ಪುಡಿ, ಜೀರಿಗೆ ಉಪ್ಪು, ನೀರು ಹಾಕಿ ಕಲಸಿಕೊಳ್ಳಿ.  ನಂತರ ಕೈಯಲ್ಲಿ ತಟ್ಟಿ ವಡೆ ಮಾಡಿಕೊಳ್ಳಿ. ಇದನ್ನು ಕಾದ ಎಣ್ಣೆಯಲ್ಲಿ ಹಾಕಿ ಹುರಿದು ತೆಗೆದರೆ ಕರಿಬೇವು ಸೊಪ್ಪಿನ ವಡೆ ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ