ಬಾಯಲ್ಲಿ ನೀರೂರಿಸುವ ಚಿಕನ್ ಟಿಕ್ಕಾ ಬಿರಿಯಾನಿ

ಮಂಗಳವಾರ, 18 ಏಪ್ರಿಲ್ 2017 (18:54 IST)
ಬೆಂಗಳೂರು: ಚಿಕನ್ ರೆಸಿಪಿಗಳು ನಾನ್ ವೆಜ್ ಪ್ರಿಯರ ಫೇವರಿಟ್ ಡಿಶ್. ಊಟದ ವೇಳೆ ಸ್ಪೆಷಲ್ಲಾಗಿ ಮಾಡಲು ಚಕನ್ ಟಿಕ್ಕಾ ಬಿರಿಯಾನಿ ಹೇಳಿಕೊಡುತ್ತೇವೆ ನೋಡಿಕೊಳ್ಳಿ.

 
ಬೇಕಾಗುವ ಸಾಮಗ್ರಿಗಳು

ಬಾಸುಮತಿ ಅಕ್ಕಿ 500 ಗ್ರಾಂ
ಈರುಳ್ಳಿ 200 ಗ್ರಾಂ
ಮೊಸರು
ಮೆಣಸಿನ ಹುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಚಕ್ಕೆ, ಲವಂಗ
ಮರಾಟ ಮೊಗ್ಗು
ಗರಂ ಮಸಾಲ ಪೌಡರ್
ಎಣ್ಣೆ, ನಿಂಬೆ ರಸ
500 ಗ್ರಾಂ ಚಿಕನ್
ಹಸಿಮೆಣಸಿನಕಾಯಿ
ಜೀರಾ ಮತ್ತು ಧನಿಯಾ ಪೌಡರ್
ಪುದಿನಾ ಸೊಪ್ಪು
ಕೊತ್ತಂಬರಿ  ಸೊಪ್ಪು
ತುಪ್ಪ
ಉಪ್ಪು

ನೆನೆಸಿಡಲು

ಜೀರಾ ಪೌಡರ್
ಕಸೂರಿ ಮೇಥಿ ಪೌಡರ್
ತಂದೂರಿ ಮಸಾಲ
ಮೆಣಸಿನ ಹುಡಿ
ಮೊಸರು

ಮಾಡುವ ವಿಧಾನ

ಒಂದು ಪ್ಯಾನ್ ನಲ್ಲಿ ಒಂದು ಲೀ. ನಷ್ಟು ನೀರು ಹಾಕಿ ಕತ್ತರಿಸಿದ ಚಿಕನ್ ಪೀಸ್ ಗಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಬೆಂದ ನಂತರ ಉರಿ ನಿಲ್ಲಿಸಿ. ಚಿಕನ್ ಪೀಸ್ ಗಳನ್ನು ತೆಗೆದು ನೀರು ತೆಗೆದಿಟ್ಟುಕೊಳ್ಳಿ.

ಚಿಕನ್ ಟಿಕ್ಕಾ ಮಾಡಲು ಎಲ್ಲಾ ಮಸಾಲ ಪದಾರ್ಥಗಳನ್ನು ಹುಡಿ ಮಾಡಿ ಪೇಸ್ಟ್ ಮಾಡಿ. ಇದನ್ನು ಬೇಯಿಸಿದ ಚಿಕನ್ ಪೀಸ್ ಗೆ ಸವರಿ. 30 ನಿಮಿಷ ಹಾಗೇ ಬಿಡಿ. ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಪೇಸ್ಟ್ ಸವರಿದ ಚಿಕನ್ ಪೀಸ್ ಗಳನ್ನು ಫ್ರೈ ಮಾಡಿ. ನಂತರ ಚೆನ್ನಾಗಿ ಕಂದುಬಣ್ಣಕ್ಕೆ ತಿರುಗುವವರೆಗೆ ಗ್ರಿಲ್ ಮಾಡಿ.

ಅಕ್ಕಿ ತೊಳೆದಿಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿಚಕ್ಕೆ ಲವಂಗ, ಏಲಕ್ಕಿ, ಮರಾಟ ಮೊಗ್ಗು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ತೊಳೆದಿಟ್ಟುಕೊಂಡ ಅಕ್ಕಿಗೆ ಚಿಕನ್ ಬೇಯಿಸಿದಾಗ ಉಳಿದ ನೀರು ಸೇರಿಸಿ ಬೇಯಿಸಿ. ಅನ್ನ ಬೆಂದ ಮೇಲೆ ಫ್ರೈ ಮಾಡಿಟ್ಟುಕೊಂಡ ಚಿಕನ್ ಪೀಸ್ ಸೇರಿಸಿದರೆ ಚಿಕನ್ ಟಿಕ್ಕಾ ಬಿರಿಯಾನಿ ರೆಡಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ