ಬೆಳಗ್ಗಿನ ಉಪಹಾರಕ್ಕೆ ರುಚಿಕರವಾದ ಕೇರಳ ಶೈಲಿಯ ಅಪ್ಪಂ

ಶುಕ್ರವಾರ, 9 ಸೆಪ್ಟಂಬರ್ 2022 (06:38 IST)
ಕೇರಳದ ಬೆಳಗ್ಗಿನ ಫೇಮಸ್ ಉಪಹಾರಗಳಲ್ಲಿ ಒಂದು ಈ ಅಪಂ. ತಳವಿರುವ ಪ್ಯಾನ್ ಒಂದಿದ್ದರೆ, ಸಿಂಪಲ್ ಆಗಿ ಹಾಗೂ ಸುಲಭವಾಗಿಯೇ ತಯಾರಿಸಬಹುದು ಅಪ್ಪಂ.

 ಅತ್ಯಂತ ರುಚಿಕರ ಅಪ್ಪಂ ಅನ್ನು ಒಂದು ಸಲ ಮಾಡಿ ಸವಿದರೆ, ಪದೇ ಪದೇ ಮಾಡಬೇಕೆನಿಸುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು

ಅಕ್ಕಿ – 3 ಕಪ್
ನೀರು – ನೆನೆಸಲು ಮತ್ತು ರುಬ್ಬಲು
ತುರಿದ ತೆಂಗಿನಕಾಯಿ – ಅರ್ಧ ಕಪ್
ಅನ್ನ – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ

* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ.
* ಬಳಿಕ ಅಕ್ಕಿಯನ್ನು ಬಸಿದು, ಮಿಕ್ಸರ್ ಜಾರ್ಗೆ ಹಾಕಿ ಹಿಟ್ಟಿಗೆ ಬೇಕಾಗುವಷ್ಟು ನೀರು ಹಾಕಿ ನಯವಾಗಿ ರುಬ್ಬಿ.
* ಈಗ ಬಾಣಲೆಗೆ ಈ ಅಕ್ಕಿ ಹಿಟ್ಟನ್ನು ಹಾಕಿ, ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿ.
* ಈಗ ಆ ಹಿಟ್ಟು ಸಂಪೂರ್ಣ ತಣ್ಣಗಾಗಲು ಬಿಟ್ಟು, ಬಳಿಕ ಮತ್ತೆ ಮಿಕ್ಸರ್ ಜಾರ್ಗೆ ಹಾಕಿ.
* ಅದಕ್ಕೆ ತೆಂಗಿನ ತುರಿ, ಅನ್ನ ಹಾಗೂ ನೀರನ್ನು ಹಾಕಿ, ನಯವಾಗಿ ರುಬ್ಬಿ.
* ಈಗ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ, 8 ಗಂಟೆಗಳ ಕಾಲ ಚೆನ್ನಾಗಿ ಹುದುಗಲು ಬಿಡಿ.
* 8 ಗಂಟೆ ಬಳಿಕ ಅದಕ್ಕೆ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
* ಅಪ್ಪಂ ಮಾಡುವ ಪ್ಯಾನ್ ಅನ್ನು ಬಿಸಿ ಮಾಡಿ, 1 ಸೌಟು ಹಿಟ್ಟು ಸುರಿದು, ಇಡೀ ಪ್ಯಾನ್ ಸುತ್ತುವರಿಯುವಂತೆ ತಿರುಗಿಸಿ.
* ಅಪ್ಪಂ ಚೆನ್ನಾಗಿ ಬೇಯುವವರೆಗೆ ಮುಚ್ಚಿ.
* ಈಗ ಅಪ್ಪಂ ತಯಾರಾಗಿದ್ದು, ತೆಂಗಿನಕಾಯಿ ಚಟ್ನಿಯೊಂದಿಗೆ ಆನಂದಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ