ಬೆಂಗಳೂರು : ಪೆಡಾಗಳನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಹಲವು ಬಗೆಯ ಪೇಡಾಗಳಿವೆ, ಅದರಲ್ಲಿ ಮಾವಿನ ಪೇಡಾ ಕೂಡ ಒಂದು. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು : 2 ಚಮಚ ತುಪ್ಪ, ¼ ಕಪ್ ಹಾಲು, ಸ್ವಲ್ಪ ಕೇಸರಿ, 1 ಕಪ್ ಮಾವಿನ ತಿರುಳು, ¼ ಕಪ್ ಸಕ್ಕರೆ, 1 ಕಪ್ ಹಾಲಿನ ಪುಡಿ, ¼ ಕಪ್ ಗೋಡಂಬಿ ಪುಡಿ, ¼ ಚಮಚ ಏಲಕ್ಕಿ ಪುಡಿ.
ಮಾಡುವ ವಿಧಾನ : ಮೊದಲಿಗೆ ಬಾಣಲೆಯಲ್ಲಿ ತುಪ್ಪ, ಹಾಲು, ಕೇಸರಿ, ಮಾವಿನ ತಿರುಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಸಕ್ಕರೆ ಸೇರಿಸಿ ಅದು ಕರಗುವವರೆಗೂ ಬೆರೆಸಿ ಅದಕ್ಕೆ ಹಾಲಿನ ಪುಡಿ, ಗೋಡಂಬಿ ಪುಡಿ ಸೇರಿಸಿ ಗಟ್ಟಿಯಾಗುವವರೆಗೂ ಮಿಕ್ಸ್ ಮಾಡುತ್ತಾ ಇರಿ. ನಂತರ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ. ಮಿಶ್ರಣ ತಳಬಿಡಲು ಪ್ರಾರಂಭಿಸಿದಾಗ ಕೆಳಗಿಳಿಸಿ 5 ನಿಮಿಷ ತಣ್ಣಗಾಗಲು ಬಿಟ್ಟು ಪೇಡಾ ತಯಾರಿಸಿ.