ಬೆಂಗಳೂರು : ಶ್ರಾವಣ ಮಾಸದಲ್ಲಿ ಹೆಚ್ಚಾಗಿ ದೇವರ ಪೂಜೆ ಮಾಡುತ್ತೇವೆ. ಆ ವೇಳೆ ಈ ಸಿಹಿ ಪ್ರಸಾದ ಮಾಡಬಹುದು. ಅಥವಾ ಸಿಹಿ ತಿನ್ನಬೇಕು ಎನಿಸಿದಾಗ ಇದನ್ನು ಮಾಡಿ ಸೇವಿಸಿದರೆ ಉತ್ತಮವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು : ½ ಕಪ್ ಅವಲಕ್ಕಿ, 1 ಕಪ್ ಬೆಲ್ಲ, 1 ಕಪ್ ಒಣಕೊಬ್ಬರಿ, ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ತುಪ್ಪ.
ಮಾಡುವ ವಿಧಾನ : ಅವಲಕ್ಕಿಯನ್ನು ಕ್ಲೀನ್ ಮಾಡಿ. ಬಳಿಕ ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರನ್ನು ಹಾಕಿ ಕುದಿಸಿ. ಬೆಲ್ಲ ಕರಗಿ ಕುದಿ ಬಂದ ಬಳಿಕ ಅದಕ್ಕೆ ಕೊಬ್ಬರಿ ತುರಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಬಳಿಕ ಅವಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದರೆ ಸಿಹಿ ಅವಲಕ್ಕಿ ರೆಡಿ.