ನುಗ್ಗೆ ಸೊಪ್ಪಿನ ವಡೆ

ಬುಧವಾರ, 14 ಡಿಸೆಂಬರ್ 2016 (15:46 IST)
ಬೆಂಗಳೂರು: ಚುಮು ಚುಮು ಚಳಿಗೆ ಖಡಕ್ ಚಹಾದೊಂದಿಗೆ ಸೇವಿಸಲು ವಡೆ ಇದ್ದರೆ ಚೆನ್ನಾಗಿರುತ್ತದಲ್ಲವೇ? ಅದಕ್ಕೆಂದೇ ನುಗ್ಗೇಸೊಪ್ಪಿನ ವಡೆ ಮಾಡವುದು ಹೇಗೆಂದು ವಿವರಿಸಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿಗಳು:

1.       ನುಗ್ಗೇಸೊಪ್ಪ
2.       ಕಡಲೆ ಬೇಳೆ
3.       ಜೀರಿಗೆ/ ಸೋಂಪು
4.       ಈರುಳ್ಳಿ
5.       ಹಸಿಮೆಣಸು
6.       ಉಪ್ಪು
7.       ಕರಿಯಲು ಎಣ್ಣೆ
ಮಾಡುವ ವಿಧಾನ

ಕಡಲೆ ಬೇಳೆಯನ್ನು ಕೆಲವು ಗಂಟೆ ನೆನೆ ಹಾಕಿ ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ನುಗ್ಗೆಸೊಪ್ಪ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ ಹಾಕಿ ಕಲಸಿಕೊಳ್ಳಿ. ನಂತರ ಕೈಯಲ್ಲಿ ತಟ್ಟಿಕೊಂಡು ಎಣ್ಣೆಯಲ್ಲಿ ಕರಿದರೆ ನುಗ್ಗೆಸೊಪ್ಪಿನ ವಡೆ ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ