ಚಳಿಗಾಲಕ್ಕೆ ಎಲ್ಲರಿಗೂ ಇಷ್ಟವಾಗುವ ರೆಸಿಪಿ!

ಶನಿವಾರ, 27 ನವೆಂಬರ್ 2021 (11:41 IST)
ಚುರುಮುರಿ ರೆಸಿಪಿ ಯಾವುದೇ ಅಲಂಕಾರಿಕ ಪದಾರ್ಥಗಳಿಲ್ಲದೆ ತಯಾರಿಸಬಹುದು ಮತ್ತು ಹತ್ತು ನಿಮಿಷಗಳಲ್ಲಿ ಇದನ್ನು ಸುಲಭವಾಗಿ ತಯಾರು ಮಾಡಬಹುದು ಎಂಬುದೇ ಇದರ ವಿಶೇಷತೆ.
ಇದು ಆರೋಗ್ಯಕರ ತಿಂಡಿಯಾಗಿದ್ದು ನಂಬಲಾಗದಷ್ಟು ಅಗ್ಗವಾಗಿದೆ. ಎರಡನೆಯದಾಗಿ, ಇದು ತುಂಬಾ ರುಚಿಕರವಾಗಿದೆ.   ಹುರಿದ ಕಡಲೆಕಾಯಿ, ಕೆಂಪು ಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೊ, ಕೊತ್ತಂಬರಿ ಎಲೆಗಳು, ಜೀರಿಗೆ ಮತ್ತು ಹಸಿರು ಮೆಣಸಿನಕಾಯಿಗಳೊಂದಿಗೆ ಮಂಡಕ್ಕಿಯನ್ನ ಮಿಶ್ರಣ ಮಾಡಿದರೆ ಅದ್ಭುತ ರುಚಿಯನ್ನು ನೀಡುತ್ತದೆ.
ಯಾವಾಗಲೂ ಸ್ವಲ್ಪ ಪ್ರಯೋಗ ಮಾಡಬಹುದು ಮತ್ತು ತಮ್ಮದೇ ಆದ ಆಯ್ಕೆಯ ಪದಾರ್ಥಗಳನ್ನು ಸೇರಿಸಬಹುದು ಅಥವಾ ಬಿಡಬಹುದು. ಅನೇಕ ಜನರು ತುಪ್ಪ, ಸೇವು, ಬೂಂದಿ ಸೇರಿಸುತ್ತಾರೆ.
ಬೇಕಾಗುವ ಸಾಮಾಗ್ರಿಗಳು
ಮಂಡಕ್ಕಿ –ಅಗತ್ಯವಿದ್ದಷ್ಟು
ಈರುಳ್ಳಿ- ಅರ್ಧ ಕಪ್ ( ಉದ್ದವಾಗಿ ಕತ್ತರಿಸಿಕೊಳ್ಳಿ)
ಶೇಂಗಾ – 2 ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಸೇವ್- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಹಸಿ ಮೆಣಸು- 2( ಸಣ್ಣದಾಗಿ ಕತ್ತರಿಸಿಕೊಳ್ಳಿ)
ಟೊಮ್ಯಾಟೊ- 1
ಜೀರಿಗೆ- 1 ಟೀ ಚಮಚ
ಅಚ್ಚು
ಖಾರದ ಪುಡಿ- 1 ಟೀ ಚಮಚ
ಚುರುಮುರಿ ಮಾಡುವ ವಿಧಾನ
ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪಾ ಹಾಕಿ. ನಂತರ ಈರುಳ್ಳಿ, ಶೇಂಗಾ, ಹೆಚ್ಚಿಕೊಂಡಿರುವ ಹಸಿ ಮೆಣಸು, ಟೊಮ್ಯಾಟೋ, ಜಿರಿಗೆ ಹಾಗೂ ಸ್ವಲ್ಪ ಅಚ್ಚ ಖಾರದ ಪುಡಿ ಹಾಕಿ ಚನ್ನಾಗಿ ಮಿಶ್ರಣ ಮಾಡಿ.  ನಿಮಗೆ ಇಷ್ಟವಿದ್ದರೆ ಇದಕ್ಕೆ ಕ್ಯಾರೆಟ್ ತುರಿದು ಹಾಕಬಹುದು.
ಅಲ್ಲದೇ ಚಾಟ್ ಮಸಾಲಾ ಸಹ ಹಾಕಿದರೆ ಹೆಚ್ಚಿನ ರುಚಿ ಸಿಗುತ್ತದೆ. ಇನ್ನು ಆ ಮಿಶ್ರಣಕ್ಕೆ ಮಂಡಕ್ಕಿಯನ್ನು ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿ ಅದಕ್ಕೆ ಉಪ್ಪು ಮತ್ತು ಕೊತ್ತಂಬರಿ ಹಾಕಿ ಕಲಸಿ.  ಚನ್ನಾಗಿ ಕಲಸಿದ ಮೇಲೆ ಉಪ್ಪು ಮತ್ತು ಖಾರದ ಅಗತ್ಯ ಇದೆಯಾ ನೋಡಿ , ಅಗತ್ಯವಿದ್ದರೆ ಹಾಕಿ ಕಲಸಿದರೆ ರುಚಿ ರುಚಿಯಾದ ಚುರುಮುರಿ ಸಿದ್ದ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ