ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಮಾಡಬೇಕು ಎಂಬ ಚಿಂತೆ ಬಿಡಿ!

ಬುಧವಾರ, 17 ನವೆಂಬರ್ 2021 (14:27 IST)
ಫೇಸ್ ಪ್ಯಾಕ್ ಗಳ ಬಳಕೆಯಿಂದ ತ್ವಚೆಯಲ್ಲಿರುವ ಕಲ್ಮಶಗಳು, ಕೊಳೆ ಮತ್ತು ಸತ್ತ ಜೀವಕೋಶಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.
ಇನ್ನೂ ಈಗ ಚಳಿಗಾಲ ಆರಂಭವಾಗಿದೆ. ತ್ವಚೆಯ ಅಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಂಥಹ ಸಮಯದಲ್ಲಿ ಕೆಲ ಫೇಸ್ ಪ್ಯಾಕ್ಗಳು ಸಹಾಯ ಮಾಡುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಫೇಸ್ಪ್ಯಾಕ್ಗಳು ಇಲ್ಲಿದೆ. 
ಹಲವಾರು ರೀತಿಯ ಪ್ಯಾಕ್ಗಳಿವೆ, ಆದರೆ ನೀವು ನಿಮ್ಮ ತ್ವಚೆಗೆ ಸೂಕ್ತವಾಗುವ ಪ್ಯಾಕ್ ಮಾತ್ರ ಬಳಸಬೇಕು. ಒಣ ತ್ವಚೆಯವರಿಗೆ ಜೇನು, ಕಿತ್ತಳೆ ರಸ, ಹಾಲು, ಮೊಸರು, ಬಾದಾಮಿ ಎಣ್ಣೆ, ಕಳ್ಳಿ ಮತ್ತು ಜೇನುತುಪ್ಪವನ್ನು ಒಳಗೊಂಡಿರುವ ಫೇಸ್ ಪ್ಯಾಕ್ ಗಳನ್ನು ಬಳಸಿ. ಇದು ಚರ್ಮವನ್ನು ತೇವಗೊಳಿಸುತ್ತದೆ.
ಮುಲ್ತಾನಿ ಮಿಟ್ಟಿ
ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಮತ್ತು ಮೊಡವೆಗಳನ್ನು ಹೊಂದಿದ್ದರೆ ಮುಲ್ತಾನಿ ಮಿಟ್ಟಿಯನ್ನು ಬಳಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗ ಮತ್ತು ಒಂದು ಚಮಚ ಮೊಸರು ಸೇರಿಸಿ, ಅರ್ಧ ಟೀಚಮಚ ಜೇನುತುಪ್ಪವನ್ನು ಸೇರಿಸಿ  ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಮುಲ್ತಾನಿ ಮಿಟ್ಟಿ ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ಹಾಗೆಯೇ ಬಿಡಿ. ನಂತರ ತೊಳೆಯಿರಿ. ಇದು  ಎಣ್ಣೆಯುಕ್ತ ಚರ್ಮಕ್ಕೆ ಪರಿಹಾರ ನೀಡುತ್ತದೆ.
ಪಪ್ಪಾಯಿ ಹಣ್ಣು
ಮಾಗಿದ ಪಪ್ಪಾಯಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ತ್ವಚೆ ಕಾಂತಿಯುತವಾಗುತ್ತದೆ. ಪಪ್ಪಾಯಿಯ ಬಳಕೆ ಮಾಡುವುದರಿಂದ ಅದರಲ್ಲಿನ ಅಂಶಗಳು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ.
ಕ್ಯಾರೆಟ್
ಚಳಿಗಾಲದಲ್ಲಿ ತ್ವಚೆಯ ಸಮಸ್ಯೆಗಳಿಗೆ ಕ್ಯಾರೆಟ್ ಬಳಸುವುದರಿಂದ ತಕ್ಷಣ ಪ್ರಯೋಜನ ಲಭಿಸುತ್ತದೆ. ಮೊದಲು ಕ್ಯಾರೆಟ್ ಅನ್ನು ರುಬ್ಬಿಕೊಳ್ಳಿ ಮತ್ತು ಮುಖದ ಮೇಲೆ 15 ರಿಂದ 20 ನಿಮಿಷಗಳ ಕಾಲ ಹಚ್ಚಿ ಅದನ್ನು ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ. ಕ್ಯಾರೆಟ್ನಲ್ಲಿರುವ ವಿಟಮಿನ್ ಎ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದು ಚರ್ಮವನ್ನು  ತೇವಗೊಳಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ.
ಕಿತ್ತಳೆ ಸಿಪ್ಪೆ
ಒಂದು ಬಟ್ಟಲಿನಲ್ಲಿ ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿ, ಮೊಸರು ಮತ್ತು ಕ್ಯಾಕ್ಟಸ್ ಜೆಲ್ ತೆಗೆದುಕೊಳ್ಳಿ. ಇವುಗಳನ್ನು ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 30 ನಿಮಿಷಗಳ ನಂತರ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚುತ್ತದೆ.
ಒಂದು ಚಮಚ ಕಿತ್ತಳೆ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಚರ್ಮವು ಕಾಂತಿಯುತವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ