ಫ್ರಿಡ್ಜ್ ಶುಚಿಯಾಗಿಡಲು ಕೆಲವು ಉಪಾಯಗಳು

ಮಂಗಳವಾರ, 21 ನವೆಂಬರ್ 2017 (08:22 IST)
ಬೆಂಗಳೂರು: ಪ್ರಿಡ್ಜ್ ಶುಚಿಯಾಗಿಡುವುದೇ ಗೃಹಿಣಿಯರಿಗೆ ದೊಡ್ಡ ತಲೆನೋವಿನ ವಿಷಯ. ಫ್ರಿಡ್ಜ್ ಶುಚಿಯಾಗಿಡಲು ಕೆಲವು ಉಪಾಯಗಳು ಇಲ್ಲಿವೆ.
 

ಶುಚಿಗೊಳಿಸುವಿಕೆ
ವಾರಕ್ಕೊಮ್ಮೆಯಾದರೂ ಫ್ರಿಡ್ಜ್ ನಲ್ಲಿರುವ ತರಕಾರಿ, ಹಣ್ಣು ಹಾಗೂ ಇತರ ಸಾಮಾನುಗಳನ್ನು ಹೊರಗೆ ಹಾಕಿ ಶುದ್ಧ ಬಟ್ಟೆ ಬಳಸಿ ಶುಚಿಗೊಳಿಸಿ.  ಫ್ರಿಡ್ಜ್ ನಲ್ಲಿ ತೆಗೆಯಬಹುದಾದ ಟ್ರೇಗಳನ್ನು ಹೊರಗೆ ತೆಗೆದಿಟ್ಟು ಸ್ವಲ್ಪ ಹೊತ್ತು ನೀರಿನಲ್ಲಿ ಮುಳುಗಿಸಿ ಶುಚಿಗೊಳಿಸಿ.

ಆಹಾರವನ್ನು ಇಡುವ ಕ್ರಮ
ಫ್ರಿಡ್ಜ್  ಎಂದರೆ ತಂಗಳ ಪೆಟ್ಟಿಗೆ ಎಂದು ಕೆಲವರು ಅಣಕವಾಡುವದೇನೋ ಸರಿ. ಹಾಗಂತ ಇಲ್ಲಿ ಬೇಕಾಬಿಟ್ಟಿ ಆಹಾರವನ್ನು ಇಟ್ಟುಕೊಳ್ಳಬೇಡಿ. ಕ್ರಮವಾಗಿ, ಒಪ್ಪವಾಗಿ ಜೋಡಿಸಿಡಿ.

ಬಾಟಲಿಗಳ ನಿರ್ವಹಣೆ
ಬಾಟಲಿಗಳು, ಗಾಜಿನ ಲೋಟಗಳನ್ನು ಫ್ರಿಡ್ಜ್ ನಲ್ಲಿಟ್ಟಿದ್ದರೆ, ಅವುಗಳನ್ನು ನಿಯಮಿತವಾಗಿ ಹೊರಗಿಟ್ಟು ಶುಚಿಯಾದ ಬಟ್ಟೆಯಿಂದ ಒರೆಸಿ ತೇವಾಂಶ ತೆಗೆಯಿರಿ.

ಫ್ರಿಡ್ಜ್ ಸುಗಂಧ
ಫ್ರಿಡ್ಜ್ ನಲ್ಲಿ ಸುಗಂದ ಬಿರುವ ಅಡೋರ್ ಇರಿಸಿಕೊಳ್ಳಿ. ಅದಕ್ಕೆ ಬೇರೇನೂ ಮಾಡಬೇಕಾಗಿಲ್ಲ. ಪರಿಮಳಯುಕ್ತ ಲವಂಗ, ನಿಂಬೆ ಹಣ್ಣನ್ನು ಇಟ್ಟುಕೊಂಡರೂ ಸಾಕು. ಫ್ರಿಡ್ಜ್ ಘಮ ಘಮಿಸುತ್ತಿರುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ