ಬೆಂಗಳೂರು: ಹೆಸರು ಕಾಳು ಹಾಕಿ ದೋಸೆ ಮಾಡುವ ಹಾಗೆ ಹುರುಳಿಕಾಳನ್ನೂ ದೋಸೆ ಮಾಡಬಹುದು. ಹುರುಳಿ ಕಾಳು ಶಕ್ತಿ ವರ್ಧಕ. ಹಾಗೆಯೇ ಅದಕ್ಕೊಂದು ಫ್ಲೇವರ್ ಇದೆ. ಅದು ದೋಸೆಗೆ ವಿಶೇಷ ರುಚಿ ಒದಗಿಸುತ್ತದೆ.
ಬೇಕಾಗುವ ಸಾಮಗ್ರಿಗಳು:
ಹುರುಳಿ ಕಾಳು
ತೆಂಗಿನ ತುರಿ
ಬೆಳ್ತಿಗೆ ಅಕ್ಕಿ
ಉಪ್ಪು
ಮಾಡುವ ವಿಧಾನ
ಅಕ್ಕಿ ಮತ್ತು ಹುರುಳಿ ಕಾಳನ್ನು ನೆನೆ ಹಾಕಿ. ನೆನೆದ ಅಕ್ಕಿ ಹಾಗೂ ಹುರುಳಿ ಕಾಳನ್ನು ತೆಂಗಿನ ತುರಿಯ ಜತೆ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ತುಂಬಾ ತೆಳ್ಳಗೆ ಮಾಡುವುದು ಬೇಡ. ಕಾದ ತವಾ ಮೇಲೆ ಎಣ್ಣೆ ಸವರಿಕೊಂಡು ದೋಸೆ ಹುಯ್ಯಿರಿ. ಎರಡೂ ಬದಿ ತುಪ್ಪ ಅಥವಾ ಬೆಣ್ಣೆ ಸವರಿಕೊಂಡು ಬೇಯಿಸಿ. ಚಟ್ನಿಯೊಂದಿಗೆ ಸೇವಿಸಲು ಬಲು ರುಚಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ