ಜಿರಳೆ ಓಡಿಸಲು ಸುಲಭ ಉಪಾಯ ಇಲ್ಲಿದೆ ನೋಡಿ

ಶನಿವಾರ, 3 ಮಾರ್ಚ್ 2018 (08:50 IST)
ಬೆಂಗಳೂರು: ಅಡುಗೆ ಮನೆಯಲ್ಲಿ ಜಿರಳೆ ಕಾಟದಿಂದ ಬೇಸತ್ತಿದ್ದೀರಾ? ಹಾಗಿದ್ದರೆ  ಅದನ್ನು ಓಡಿಸಲು ತುಂಬಾ ಕಷ್ಟಪಡಬೇಕಿಲ್ಲ. ಅದಕ್ಕೊಂದು ಸುಲಭ ಉಪಾಯ ಇಲ್ಲಿದೆ ನೋಡಿ.

ಜಿರಳೆ ಹಿಡಿಯಲು ಅಡುಗೆ ಮನೆಯಲ್ಲೇ ಇರುವ ಚಕ್ಕೆ ಎಲೆಗಳೇ ಸಾಕು. ಆದರೆ ಹಳೆಯ ಎಲೆ ಉಪಯೋಗಿಸಬೇಡಿ. ಒಳ್ಳೆ ಘಮ ಕೊಡುವ ಚಕ್ಕೆ ಎಲೆಗಳನ್ನು ಅಡುಗೆ ಮನೆಯಲ್ಲಿ ಅಲ್ಲಲ್ಲಿ ಇಡಿ.

ಇದು ಜಿರಳೆ ಕೊಲ್ಲುವುದಿಲ್ಲ. ಆದರೆ ಇದರ ಘಮಕ್ಕೆ ಜಿರಳೆ ಅತ್ತ ಸುಳಿಯುವುದಿಲ್ಲ. ಅಥವಾ ಚಕ್ಕೆ ಎಲೆಗಳನ್ನು ಪುಡಿ ಮಾಡಿಕೊಂಡು ಹೆಚ್ಚಾಗಿ ಜಿರಳೆ ಓಡಾಡುವ ಜಾಗದಲ್ಲಿಟ್ಟರೂ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ