ಬಾಳೆಹಣ್ಣಿನಿಂದ ರುಚಿಯಾದ ರಸಾಯನ ಶಾಸ್ತ್ರ!
ಬಾಳೆಹಣ್ಣನ್ನು ಚಿಕ್ಕ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಬೆಲ್ಲ ತುರಿದು ಒಂದು ಗಂಟೆ ಬಿಡಿ. ಬೆಲ್ಲ ಬಾಳೆಹಣ್ಣಿನೊಂದಿಗೆ ಸಂಪೂರ್ಣವಾಗಿ ಕರಗಿ ಮಿಕ್ಸ್ ಆದ ಮೇಲೆ ಕಾಯಿ ಹಾಲು ತಯಾರಿಸಿ ಸೇರಿಸಿ. ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಮತ್ತು ಎಳ್ಳನ್ನು ಫ್ರೈ ಮಾಡಿ ಹಾಕಿ. ಇದು ಘಮ ಕೊಡುತ್ತದೆ. ಚೆನ್ನಾಗಿ ತಿರುವಿ ನಂತರ ಕಪ್ ನಲ್ಲಿ ಹಾಕಿಕೊಡಿ. ಆರೋಗ್ಯಕ್ಕೂ ಉತ್ತಮ, ರುಚಿಕರ ಕೂಡಾ.