ಬ್ರೆಡ್ ಜಾಮೂನ್ ಮಾಡುವುದು ಹೇಗೆ?

ಶುಕ್ರವಾರ, 16 ಡಿಸೆಂಬರ್ 2016 (12:27 IST)
ಬೆಂಗಳೂರು: ಜಾಮೂನು ಎಂದ ತಕ್ಷಣ ಗುಲಾಬ್ ಜಾಮೂನು ಮಾತ್ರ ತಲೆಗೆ ಬರುವುದು. ಮನೆಯಲ್ಲಿ ಬ್ರೆಡ್ ತಂದು ಎರಡು ದಿನವಾದರೂ ತಿನ್ನುವವರಿಲ್ಲದೆ ಒಣಗಿ ಹಾಳಾಗುತ್ತದೆ ಎಂದರೆ ಅದನ್ನು ಜಾಮೂನು ಮಾಡಿ ಸವಿಯಬಹುದು. ಹೇಗೆ ಎನ್ನುವುದನ್ನು ಇಲ್ಲಿ ಹೇಳಿದ್ದೇವವೆ ನೋಡಿ.

ಬೇಕಾಗುವ ಸಾಮಗ್ರಿಗಳು:

ಬ್ರೆಡ್
ಸಕ್ಕರೆ
ಏಲಕ್ಕಿ
ಹಾಲು
ಕರಿಯುವ ಎಣ್ಣೆ

ಮಾಡುವ ವಿಧಾನ:
ಬ್ರೆಡ್ ನ ನಾಲ್ಕೂ ಬದಿಗಳನ್ನು ಕತ್ತರಿಸಿ ಹಾಲಲ್ಲಿ ಅದ್ದಿ ಹಿಂಡಿಕೊಳ್ಳಿ. ಇದು ಹಿಟ್ಟಿನಂತಾಗುತ್ತದೆ. ಇದನ್ನು ನುಣ್ಣಗೆ ಉಂಡೆ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಇಟ್ಟು, ಅದು ಕಾದ ನಂತರ ಬ್ರೆಡ್ ಉಂಡೆಗಳನ್ನು ಕರಿಯಿರಿ. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಪಾಕ ಮಾಡಿಕೊಂಡು ಬಿಸಿ ಪಾಕಕ್ಕೆ ಕರಿದ ಉಂಡೆಗಳನ್ನು ಹಾಕಿ ಸ್ವಲ್ಪ ಸಮಯದ ನಂತರ ಟೇಸ್ಟ್ ನೋಡಿ. ಥೇಟ್ ಗುಲಾಬ್ ಜಾಮೂನಿನದ್ದೇ ರುಚಿ. ಖರ್ಚೂ ಕಡಿಮೆ. ಸಮಯವೂ ಕಡಿಮೆ ಸಾಕು. ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ