ಹಲ್ವಾಗಳಲ್ಲಿ ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ. ಇದು ಮಾಡುವುದಕ್ಕೂ ತುಂಬಾ ಈಸಿ. ಹಾಗೆ ಸಖತ್ ಟೇಸ್ಟಿ ಕೂಡ. ಹಾಗಿದ್ರೆ ಕ್ಯಾರೆಟ್ ಹಲ್ವಾ ಮಾಡೋದು ಹೇಗೆ…
ಕ್ಯಾರೆಟ್ ಹಲ್ವಾ
ಬೇಕಾಗುವ ಪದಾರ್ಥಗಳು:
ಕ್ಯಾರೆಟ್ – 1 ಬಟ್ಟಲು
ಹಾಲು – ¼ ಕಪ್
ಸಕ್ಕರೆ – 100 ಗ್ರಾಂ
ಗೋಡಂಬಿ – 50 ಗ್ರಾಂ
ದ್ರಾಕ್ಷಿ - 50 ಗ್ರಾಂ
ಕೋವಾ - 50 ಗ್ರಾಂ
ತುಪ್ಪ – 5 ಸ್ಪೂನ್
ಏಲಕ್ಕಿ – ಸ್ವಲ್ಪ
ಕೇಸರಿ – ಸ್ವಲ್ಪ
ಬಾದಾಮಿ - 4
ಮಾಡುವ ವಿಧಾನ: ಪಾತ್ರೆಗೆ ಹಾಲು ಹಾಕಿ ಕುದಿಯುವವರೆಗೆ ಕಾಯಿಸಬೇಕು. ಕುದಿಯುವ ಹಾಲಿಗೆ ಕ್ಯಾರೆಟ್ , ಸಕ್ಕರೆ, ಹಾಕಿ ಚೆನ್ನಾಗಿ ಕಲಕಬೇಕು. ಹಾಲು ಇಂಗಿದ ಮೇಲೆ ಅದಕ್ಕೆ ಕೋವಾ ಹಾಕಿ ಮಿಕ್ಸ್ ಮಾಡಬೇಕು.
ಮತ್ತೊಂದು ಸ್ವೌಟ್ ಮೇಲೆ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನ ಹುರಿದುಕೊಳ್ಳಬೇಕು. ಇದನ್ನು ಕ್ಯಾರೆಟ್ ಇರುವ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ, ಇಳಿಸಿಕೊಳ್ಳುವ ವೇಳೆಗೆ ಸ್ವಲ್ಪ ಏಲಕ್ಕಿ ಪುಡಿ, ಕೇಸರಿ ದಳ, ಬಾದಾಮಿ ಹಾಕಿದರೆ ರುಚಿ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ.