ತಯಾರಿಸುವ ವಿಧಾನ:
* ಮೊದಲಿಗೆ ಬ್ರೆಡ್ ಚೂರುಗಳನ್ನು ಸಮ ಅರ್ಧಭಾಗವಾಗಿ ಕತ್ತರಿಸಿ.
* ಈಗ ಅದರ ಮೇಲೆ ಹಾಲು ಸುರಿದು ಪೇಸ್ಟ್ ರೀತಿ ಮಾಡಿ ಈ ಮಿಶ್ರಣವನ್ನು ಅರ್ಧ ಗಂಟೆ ಕಾಲ ಇಡಿ.
* ಈಗ ಅರ್ಧ ಲೀಟರ್ ನೀರು ಅಥವಾ ಹಾಲು ಹಾಕಬಹುದಾದ ಬೇಕಿಂಗ್ ಡಿಶ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಸವರಿ.
* ಈಗ ಆ ಪಾತ್ರೆಗೆ ಬೆಣ್ಣೆ, ಶುಗರ್, ಮೊಟ್ಟೆ, ಖಾರದ ಪುಡಿ, ಹಾಕಿ ಚೆನ್ನಾಗಿ ಕದಡಿ.
* ಈಗ ಈ ಮಿಶ್ರಣಕ್ಕೆ ಹಾಲಿನಲ್ಲಿ ನೆನೆ ಹಾಕಿದ್ದ ಬ್ರೆಡ್ ಪೇಸ್ಟ್ ಹಾಕಿ, ಈಗ ಡ್ರೈ ಫ್ರೂಟ್ಸ್ ಮತ್ತು ನಟ್ ಮಗ್ ಹಾಕಿ ಒಮ್ಮೆ ಸೌಟ್ ನಿಂದ ತಿರುಗಿಸಿ, ಈಗ ಬೇಕಿಂಗ್ ಡಿಶ್ ಅನ್ನು ಮೈಕ್ರೋ ಓವನ್ ನಲ್ಲಿ ಇಟ್ಟು ಕಡಿಮೆ ಉಷ್ಣತೆಯಲ್ಲಿ 20 ನಿಮಿಷ ಬೇಯಿಸಿ ಆಗ ಮಿಶ್ರಣ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತದೆ. ಈಗ ಬ್ರೆಡ್ ಬಟರ್ ಪುಡ್ಡಿಂಗ್ ರೆಡಿ