ಉಪ್ಪು - ರುಚಿಗೆ
ಮಾಡುವ ವಿಧಾನ:
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಸಣ್ಣ ಉರಿಯಲ್ಲಿ ಅದಕ್ಕೆ ಲವಂಗದ ಎಲೆ, ಲವಂಗ, ಏಲಕ್ಕಿ, ಚೆಕ್ಕೆ, ಜೀರಿಗೆ ಮತ್ತು ಶುಂಠಿ ಪೇಸ್ಟ್ ಅನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ ಅದಕ್ಕೆ ಗೋಡಂಬಿ, ಬಾದಾಮಿ, ಸ್ಲೈಸ್ ಮಾಡಿದ ಒಂದು ಈರುಳ್ಳಿ ಮತ್ತು ಸೋಂಪು ಪುಡಿಯನ್ನು ಹಾಕಿ ಈರುಳ್ಳಿ ಬೇಯುವವರೆಗೆ ಹುರಿಯಿರಿ. ನಂತರ ಇದಕ್ಕೆ ತೊಳೆದಿಟ್ಟ 11/2 ಕಪ್ ಭಾಸುಮತಿ ಅಕ್ಕಿ, ಕೇಸರಿ ಹಾಲು, ಒಣದ್ರಾಕ್ಷಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ 2 ಚಮಚ ತುಪ್ಪವನ್ನು ಬೆರೆಸಿ ಮಧ್ಯಮ ಉರಿಯಲ್ಲಿ 15 ನಿಮಿಷ ಪ್ಯಾನ್ ಅನ್ನು ಮುಚ್ಚಿ ಬೇಯಿಸಿದರೆ ಕಾಶ್ಮೀರಿ ಪಲಾವ್ ರೆಡಿಯಾಗುತ್ತದೆ. ಇದನ್ನು ಒಂದು ಬೌಲ್‌ಗೆ ಹಾಕಿ ಅದರ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮತ್ತು ಹೆಚ್ಚಿದ ಸೇಬು, ಹುರಿದ ಈರುಳ್ಳಿ ಸ್ಲೈಸ್, ದಾಳಿಂಬೆ ಬೀಜಗಳಿಂದ ಅಲಂಕರಿಸಬಹುದಾಗಿದೆ.