ಸ್ವಾದಿಷ್ಠ ನಾಟಿ ಮಟನ್ ಕರಿ

ಸೋಮವಾರ, 25 ಮಾರ್ಚ್ 2019 (13:51 IST)
ಹಿಂದಿನ ಕಾಲದಲ್ಲಿ ಮಾಡುತ್ತಿದ್ದ ನಾನ್ ವೆಜ್ ಅಡುಗೆಗಳ ಎಲ್ಲಾ ಮಸಾಲೆಗಳು ಕೈಯಿಂದ ಸಿದ್ಧಪಡಿಸಿರುತ್ತಿದ್ದವು, ಆದರೆ ಇಂದು ಹಾಗಲ್ಲಾ ಎಲ್ಲವೂ ಇನ್ಸ್‌ಟೆಂಟ್, ಹಾಗಾಗೀನೆ ನಮಗೆ ನಾಟಿ ಅಡುಗೆಯ ಸ್ವಾದ ತಿಳಿಯುವುದಿಲ್ಲ. ಆದರೆ ಹಿಂದೆ ಮಾಡುತ್ತಿದ್ದಂತ ಅಡುಗೆಗಳ ರುಚಿಯೇ ಬೇರೆ ಒಮ್ಮೆ ತಿಂದರೆ ಮತ್ತೂ ಬೇಕು ಎನ್ನುವಷ್ಟು ರುಚಿಕವಾಗುತ್ತಿದ್ದವು ಆದರೆ ಇಂದಿನ ಆಧುನಿಕ ಯುಗದಲ್ಲಿ ಎಲ್ಲವು ಮರೆತೋಗಿದೆ ಹಾಗಾಗೀಯೇ ನಿಮಗೂ ಹಿಂದಿನ ಕಾಲದಂತೆ ನಾಟಿ ಶೈಲಿಯಲ್ಲಿ ನಾನ್ ವೆಜ್ ಮಾಡಿ ಸವಿಯಬೇಕು ಎಂದರೆ ಇಲ್ಲಿದೆ ಮಾಹಿತಿ.
 
ಬೇಕಾಗುವ ಸಾಮಾಗ್ರಿಗಳು :
ಮಟನ್ ಒಂದು ಕೆಜಿ 
ಅರಿಶಿಣ ಪುಡಿ ಅರ್ಧ ಚಮಚ 
ಒಣ ಮೆಣಸು (ಖಾರಕ್ಕೆ ತಕ್ಕಷ್ಟು) 
ಕೊತ್ತಂಬರಿ ಬೀಜ 1 ಚಮಚ 
ಜೀರಿಗೆ 1 ಚಮಚ 
ಲವಂಗ 5 ಎಸಳು 
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ 
ಕರಿಮೆಣಸಿನ ಕಾಳು 10 
ಚಿಕ್ಕ ಈರುಳ್ಳಿ ಬೆಳ್ಳುಳ್ಳಿ ಎಸಳು 2 
ಶುಂಠಿ ಬೆಳ್ಳುಳ್ಳಿ ಪೇಸ್ಟ್ 2-3 ಚಮಚ 
ಟೊಮೆಟೊ 1 
ಗರಂ ಮಸಾಲ ಪುಡಿ 1 ಚಮಚ 
ಎಣ್ಣೆ 3 ಚಮಚ 
ರುಚಿಗೆ ತಕ್ಕ ಉಪ್ಪು 
 
ತಯಾರಿಸುವ ವಿಧಾನ: 
ಮಟನ್ ತೊಳೆದು ಅದಕ್ಕೆ ಉಪ್ಪು ಮತ್ತು ಅರಿಶಿಣ ಹಾಕಿ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ 4 ವಿಶಲ್ ಬರುವವರೆಗೆ ಬೇಯಿಸಿ. ನಂತರ ತಣ್ಣಗಾಗಲು ಬಿಡಿ. ನಂತರ ಒಣ ಮೆಣಸು, ಜೀರಿಗೆ, ಕರಿ ಮೆಣಸಿನ ಕಾಳು, ಲವಂಗ, ಚಕ್ಕೆ ಇವುಗಳನ್ನು ಬಾಣಲೆಗೆ ಹಾಕಿ 1 ಚಮಚ ಎಣ್ಣೆ ಹಾಕಿ 2-3 ನಿಮಿಷಗಳವರೆಗೆ ಹುರಿಯಿರಿ. ಅದು ತಣ್ಣಗಾದ ಮೇಲೆ ಕತ್ತರಿಸಿದ ಅದಕ್ಕೆ ಚಿಕ್ಕ ಈರುಳ್ಳಿ (2-3) ಅದರ ಜೊತೆಗೆ ಹಾಕಿ ಮತ್ತು 2 ಬೆಳ್ಳುಳ್ಳಿ ಎಸಳು ಹಾಕಿ ಎಲ್ಲವನ್ನು ಮಿಕ್ಸಿಯಲ್ಲಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆಯನ್ನು ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಉಳಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿದು ನಂತರ ಟೊಮೆಟೊ ಹಾಕಿ ಸ್ವಲ್ಪ ಉಪ್ಪು ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ತದನಂತರ ರುಬ್ಬಿದ ಪೇಸ್ಟ್ ಹಾಕಿ, ಗರಂ ಮಸಾಲ ಹಾಗೂ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಅನ್ನು 2-3 ಚಮಚ ಹಾಕಿ ಗ್ರೇವಿ ರೀತಿಯಲ್ಲಿ ಮಾಡಿ. ನಂತರ ಬೇಯಿಸಿದ ಮಟನ್ ತುಂಡುಗಳನ್ನು ಹಾಕಿ 10 ನಿಮಿಷ ಬೇಯಿಸಿದರೆ ರುಚಿಕರವಾದ ನಾಟಿ ಶೈಲಿಯ ಮಟನ್ ಕರಿ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ