ಬೆಂಡೆಕಾಯಿ ಹಸಿ ಗೊಜ್ಜು

ಶುಕ್ರವಾರ, 23 ಡಿಸೆಂಬರ್ 2016 (21:37 IST)
ಬೆಂಗಳೂರು: ಬೆಂಡೆಕಾಯಿ ರಕ್ತ ಶುದ್ಧಿಗೆ ಒಳ್ಳೆಯದು ಎನ್ನಲಾಗುತ್ತದೆ. ಹಸಿ ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಯಾವುದಕ್ಕೂ ಬಳಸುವುದಿಲ್ಲ. ಆದರೆ ಇದರಲ್ಲಿ ಹಸಿ ಗೊಜ್ಜು ಮಾಡಬಹುದು. ಹೇಗೆ ಅಂತೀರಾ? ಕೆಳಗೆ ನೋಡಿ.


ಬೇಕಾಗುವ ಸಾಮಗ್ರಿಗಳು
ಎಳೆಯ ಬೆಂಡೆಕಾಯಿ
ಮೊಸರು
ಉಪ್ಪು
ಖಾರದ ಪುಡಿ ಅಥವಾ ಹಸಿಮೆಣಸು
ಸಾಸಿವೆ
 ಕರಿಬೇವು

ಮಾಡುವ ವಿಧಾನ
ಹಸಿ ಬೆಂಡೆಕಾಯಿಯನ್ನು ಚಿಕ್ಕದಾಗಿ ತುರಿದುಕೊಳ್ಳಿ. ಇದಕ್ಕೆ ಹುಳಿ ಮೊಸರು, ಉಪ್ಪು, ಹಸಿಮೆಣಸಿನಕಾಯಿ ಅಥವಾ ಖಾರದ ಪುಡಿ ರುಚಿಗೆ ತಕ್ಕಷ್ಟು ಹಾಕಿ ಸ್ವಲ್ಪ ಹೊತ್ತು ಬಿಡಿ. ನಂತರ ಇದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಟ್ಟರೆ ಬೆಂಡೆಕಾಯಿ ಹಸಿ ಗೊಜ್ಜು ಸಿದ್ಧ.  ನೆನಪಿಡಿ. ಇದಕ್ಕೆ ಬಿಳಿ ಬೆಂಡೆಕಾಯಿ ಅಂದರೆ ಕರಾವಳಿ ಕಡೆ ಸಿಗುವ ಜಾತಿಯ ಬೆಂಡೆಕಾಯಿ ಆದರೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ