ಹಲಸಿನ ಹಪ್ಪಳ ಮಾಡಿ ನೋಡಿ

ಶುಕ್ರವಾರ, 5 ಜೂನ್ 2020 (21:03 IST)
ಹಲಸು ಎಂದರೆ ಎಂಥವರ ಬಾಯಲ್ಲೂ ಥಟ್ಟನೇ ನೀರು ಬರದೇ ಇರದು. ಇಂಥ ಹಲಸನ್ನು ಬಳಸಿ ಹಪ್ಪಳ ಮಾಡಿ ನೋಡಿ.

ಏನೇನ್ ಬೇಕು ?:
ಹಲಸಿನ ಕಾಯಿ 1
ಇಂಗು
ಖಾರದಪುಡಿ 2 ಚಮಚ
ಉಪ್ಪು

ಮಾಡೋದ್ ಹೇಗೆ?: ಹಲಸಿನ ತೊಳೆಗಳಲ್ಲಿ ಬೀಜ ಬೇರ್ಪಡಿಸಿ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರೊಳಗೆ ತೊಳೆಗಳನ್ನು ಬೆರೆಸಿ ಅದಕ್ಕೆ ಉಪ್ಪು, ಖಾರದಪುಡಿ ಹಾಕಿ ಬೇಯಿಸಿ, ಇಂಗು ಹಾಕಿ ಕೆದಕಬೇಕು.

ಎಲ್ಲವನ್ನೂ ಒರಳಿನಲ್ಲಿ ರುಬ್ಬಬೇಕು. ರುಬ್ಬಿದ ಹಿಟ್ಟನ್ನು ಬಾಳೆ ಎಲೆಗಳ ಮೇಲೆ ಹಪ್ಪಳ ತಟ್ಟಿ ಒಣಗಿಸಿ. ಆ ಮೇಲೆ ಡಬ್ಬಿಯಲ್ಲಿ ತುಂಬಿ ಇಡಿ. ಬೇಕು ಎನಿಸಿದಾಗ ಎಣ್ಣೆಯಲ್ಲಿ ಕರಿಯಬಹುದು ಇಲ್ಲವೇ ಕೆಂಡದ ಮೇಲೆ ಸುಟ್ಟು ರುಚಿ ನೋಡಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ