ಹುರುಳಿ ಹಪ್ಪಳ ಮಾಡಿ ರುಚಿ ನೋಡಿ

ಗುರುವಾರ, 4 ಜೂನ್ 2020 (14:45 IST)
ಹುರುಳಿ ಹಪ್ಪಳ ಮಾಡಿ ನೋಡಿರದಿದ್ದರೆ ಈಗ ಟ್ರೈ ಮಾಡಿ ನೋಡಿ.

ಏನೇನ್ ಬೇಕು?

ಉದ್ದಿನ ಬೇಳೆ ಕಾಲು ಕಿಲೋ
ಹುರುಳಿ ಬೇಳೆ ಅರ್ಧ ಕಿಲೋ
ಅಕ್ಕಿ ಹಿಟ್ಟು 1 ಕಪ್
ಇಂಗು 1 ಚಮಚ
ಖಾರದ ಪುಡಿ 2 ಚಮಚ
ಉಪ್ಪು

ಮಾಡೋದು ಹೇಗೆ?: ಹುರುಳಿಯನ್ನು 8 ಗಂಟೆ ನೆನೆಹಾಕಿ ನೀರು ತೆಗೆದು ಬಟ್ಟೆಯೊಂದರಲ್ಲಿ ಗಂಟು ಹಾಕಿ. ಮೊಳಕೆಯೊಡೆದ ಹುರುಳಿಯನ್ನು ಚಾಪೆ ಮೇಲೆ ಒಣಗಿಸಿ ನಂತರ ಹಿಟ್ಟು ಮಾಡಿಕೊಳ್ಳಿ. ಉದ್ದಿನ ಬೇಳೆಯನ್ನು ಹಿಟ್ಟುಮಾಡಿಕೊಂಡು ಎರಡನ್ನೂ ಕಲೆಸಿ. ಸ್ವಲ್ಪ ಎಣ್ಣೆ, ಖಾರದಪುಡಿ, ಉಪ್ಪು, ಇಂಗು ಬೆರೆಸಿಕೊಂಡು ಹಿಟ್ಟು ಹದಮಾಡಿಕೊಳ್ಳಿ. ಸಣ್ಣ ಉಂಡೆಗಳನ್ನು ಮಾಡಿ ಲಟ್ಟಿಸಿ, ಒಣಗಿಸಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ