ಎಗ್ ಮಂಚೂರಿ ಮಾಡುವ ವಿಧಾನ

ಬುಧವಾರ, 22 ಜುಲೈ 2020 (08:43 IST)
Normal 0 false false false EN-US X-NONE X-NONE

ಬೆಂಗಳೂರು : ಮೊಟ್ಟೆ  ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದರಿಂದ ತಯಾರಿಸಿದ ಎಲ್ಲಾ ಅಡುಗೆಗಳು ರುಚಿಕರವಾಗಿರುತ್ತದೆ. ಆದಕಾರಣ ಸಂಜೆಯ ವೇಳೆಗೆ ತಿನ್ನಲು ಎಗ್ ಮಂಚೂರಿ ತಯಾರಿಸಿ ತಿನ್ನಿ.

ಬೇಯಿಸಿದ 5 ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಬಿಳಿ ಭಾಗವನ್ನು ಸಣ್ಣದಾಗಿ ಕಟ್ ಮಾಡಿ ಒಂದು ಪಾತ್ರೆಗೆ ಹಾಕಿ ಅದಕ್ಕೆ 1 ಚಮಚ ಕಾರ್ನ್ ಪ್ಲೋರ್, ಅರಶಿನ ಸ್ವಲ್ಪ, ಖಾರ ಪುಡಿ ಸ್ವಲ್ಪ, ಗರಂಮಸಾಲ ಪುಡಿ ಸ್ವಲ್ಪ, ಜೀರಿಗೆ ಪುಡಿ ಸ್ವಲ್ಪ, ಈರುಳ್ಳಿ, ಉಪ್ಪು, ಒಂದು ಹಸಿ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಕೆಂಪಾಗುವವರೆಗೂ ಕರಿಯಿರಿ. 

ಆಮೇಲೆ ಒಂದು ತವಾದಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹಸಿಮೆಣಸು, ಶುಂಠಿ, ಈರುಳ್ಳಿ ಹಾಕಿ ಫ್ರೈ ಮಾಡಿ ಅದಕ್ಕೆ 1 ಕಪ್ ಟೊಮೆಟೊ ಸೋಸ್ , 1 ಚಮಚ ಸೋಯಾ ಸೋಸ್, 1 ಚಮಚ ಚಿಲ್ಲಿ ಪೌಡರ್ ಹಾಕಿ ಚೆನ್ನಾಗಿ ಫ್ರೈ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ ಬಳಿಕ ಅದಕ್ಕೆ ಫ್ರೈ ಮಾಡಿಟ್ಟ ಮೊಟ್ಟೆಯನ್ನು ಹಾಕಿ ಮಿಕ್ಸ್ ಮಾಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ಎಗ್ ಮಂಚೂರಿ  ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ