ಬೆಂಗಳೂರು :ಬೆಳ್ಳುಳ್ಳಿಯನ್ನು ಹಲವು ಬಗೆಯ ಅಡುಗೆಗೆ ಬಳಸುತ್ತಾರೆ. ಈ ಬೆಳ್ಳುಳ್ಳಿಯಿಂದ ಚಟ್ನಿಯನ್ನು ಕೂಡ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು : ಬೆಳ್ಳುಳ್ಳಿ ಎಸಳು 1 ಕಪ್, ಒಣ ಮೆಣಸಿನ ಕಾಯಿ ¾ ಕಪ್, ಒಣ ಕೊಬ್ಬರಿ ತುರಿ 1 ಕಪ್, ಜೀರಿಗೆ 1 ಚಮಚ, ಖಾರದ ಪುಡಿ ½ ಚಮಚ, ಎಣ್ಣೆ 2 ಚಮಚ, ಉಪ್ಪು.
ಮಾಡುವ ವಿಧಾನ : ಮೊದಲಿಗೆ ಒಂದು ಬಾಣಲೆಯಲ್ಲಿ ಒಣ ಕೊಬ್ಬರಿ ತುರಿ ಹುರಿದುಕೊಳ್ಳಿ. ಬಳಿಕ ಬೆಳ್ಳುಳ್ಳಿ ಎಸಳು ಹುರಿಯಿರಿ. ಜೀರಿಗೆ , ಒಣಮೆಣಸಿನ ಕಾಯಿ ಹುರಿದುಕೊಳ್ಳಿ. ಇವಿಷ್ಟನ್ನು ಮಿಕ್ಸಿಗೆ ಹಾಕಿ ಅದಕ್ಕೆ ಉಪ್ಪು, ಖಾರದ ಪುಡಿ ಹಾಕಿ ರುಬ್ಬಿದರೆ ಬೆಳ್ಳುಳ್ಳಿ ಚಟ್ನಿ ರೆಡಿ. ಇದು ಚಪಾತಿ, ರೋಟ್ಟಿ, ಅನ್ನದ ಜೊತೆ ಸವಿಯಲು ಚೆನ್ನಾಗಿರುತ್ತದೆ.