ಮಶ್ರೂಮ್ ಆಮ್ಲೇಟ್ ರೆಸಿಪಿ

ಶುಕ್ರವಾರ, 22 ಮಾರ್ಚ್ 2019 (19:29 IST)
ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಬೆಳಗಿನ ಉಪಹಾರಕ್ಕೆ ಏನು ಮಾಡುವುದು ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ ಅದರಲ್ಲೂ ಬ್ಯಾಚುಲರ್ ಆಗಿದ್ದರಂತೂ ಮುಗಿದೇ ಹೋಯಿತು ಅವರ ಪಾಡು ಹೇಳತೀರದು ಅದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಅದು ದೊಡ್ಡ ಸವಾಲೇ ಸರಿ. ಅವರಿಗಾಗಿಯೇ ಆರೋಗ್ಯಕ್ಕೂ ರುಚಿಗೂ ಉತ್ತಮವಾಗಿರುವ ಒಂದು ಉತ್ತಮ ರೆಸಿಪಿಯನ್ನು ವಿವರವನ್ನು ಇಲ್ಲಿ ಕೊಡ್ತೇವೆ ಒಮ್ಮೆ ನೀವು ಮಾಡಿ ನೋಡಿ.
 
ಬೇಕಾಗುವ ಸಾಮಗ್ರಿಗಳು :
 
ಎಣ್ಣೆ 3 ಚಮಚ 
ಹಸಿ ಮೆಣಸಿನಕಾಯಿ 1 ಬೇರಿದ್ದಲ್ಲಿ ಇನ್ನೊಂದು 
ಶುಂಠಿ 1 ಚಮಚ
ಅಣಬೆ 6-7  
ಈರುಳ್ಳಿ 1- 2 
ಮೊಟ್ಟೆ 6 
ರುಚಿಗೆ ತಕ್ಕಷ್ಟು ಉಪ್ಪು 
ಹಸಿ ಮೆಣಸು 2 -3 
 
ತಯಾರಿಸುವ ವಿಧಾನ: 
 
ಒಂದು ಬಟ್ಟಲಿಗೆ ಮೊಟ್ಟೆ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ಕದಡಿ. ನಂತರ ಒಂದು ಪ್ಯಾನ್ ಅನ್ನು ತೆಗೆದುಕೊಳ್ಳಿ ಅದನ್ನು ಗ್ಯಾಸ್ ಮೇಲಿಟ್ಟು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಚಿಕ್ಕದಾಗಿ ಕತ್ತರಿಸಿದ ಅಣಬೆ ಹಾಕಿ, ಅಣಬೆ ಬೇಯುವವರೆಗೆ ಚೆನ್ನಾಗಿ ಫ್ರೈ ಮಾಡಿ, ಆ ಅಣಬೆಯನ್ನು ಕದಡಿದ ಮೊಟ್ಟೆಯಲ್ಲಿ ಹಾಕಿ ಮತ್ತೊಮ್ಮೆ ಚೆನ್ನಾಗಿ ಕದಡಿ. ನಂತರ ಪ್ಯಾನ್‌ಗೆ ಮತ್ತೊಮ್ಮೆ ಎಣ್ಣೆ ಹಾಕಿ ಈ ಮೊಟ್ಟೆಯ ಮಿಶ್ರಣವನ್ನು ಹಾಕಿ ಪ್ಯಾನ್ ಅನ್ನು ಪಾತ್ರೆಯಿಂದ ಮುಚ್ಚಿರಿ, ಸಾಧಾರಣ ಉರಿಯಲ್ಲಿ 5 ನಿಮಿಷಗಳವರೆಗೆ ಬೇಯಿಸಿ, ನಂತರ ಅದನ್ನೊಮ್ಮೆ ಮಗುಚಿ ಹಾಕಿ. ಈ ರೀತಿ ಮಾಡಿದರೆ ಮಶ್ರೂಮ್ ಆಮ್ಲೇಟ್ ರೆಡಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ