ಉತ್ತರ ಭಾರತದ ಆಲೂ ಪರೋಟಾ

ಅತಿಥಾ

ಮಂಗಳವಾರ, 2 ಜನವರಿ 2018 (16:28 IST)
ಉತ್ತರ ಭಾರತದ ತಿನಿಸಾಗಿರುವ ಆಲೂ ಪರೋಟಾ ಇಂದು ತನ್ನ ರುಚಿಯಿಂದ ದಕ್ಷಿಣ ಭಾರತದ ಕಡೆಗೂ ಲಗ್ಗೆ ಇಟ್ಟಿದ್ದು ಜನರು ಬೆಳಗಿನ ಉಪಹಾರವಾಗಿ ಇದನ್ನು ಸೇವಿಸುತ್ತಾರೆ. ಉತ್ತರ ಭಾರತದಲ್ಲಿ ಪ್ರತಿನಿತ್ಯ ತಯಾರಿಸುವ ಆಲೂ ಪರಾಟವನ್ನು ನಮ್ಮಲ್ಲಿ ಹೆಚ್ಚಾಗಿ ಬಳಸದಿದ್ದರೂ ಇದರ ರುಚಿ ನೋಡಿದವರಿಗೆ ಮತ್ತೊಮ್ಮೆ ತಿನ್ನಲು ಮನಸಾಗುವುದಂತು ಸುಳ್ಳಲ್ಲ ಅಂತ ರುಚಿಕರವಾದ ಆಲೂ ಪರಾಟವನ್ನು ನಾವು ಮನೆಯಲ್ಲೆ ಸುಲಭವಾಗಿ ತಯಾರಿಸಬಹುದು ಹೇಗೆ ಅಂತಾ ನಾವು ತಿಳಿಸಿಕೊಡ್ತಿವಿ ಓದಿ.
 
ಆಲೂ ಪರಾಟ
ಬೇಕಾಗುವ ಸಾಮಗ್ರಿಗಳು:
 
ಬೇಯಿಸಿದ ಆಲೂಗೆಡ್ಡೆ - 1 ಕಪ್
ಅಚ್ಚ ಖಾರದ ಪುಡಿ - 1 ಚಮಚ
ಉಪ್ಪು
ಚಿಟಿಕೆ ಅರಿಶಿಣ
ಚಾಟ್ ಮಸಾಲಾ - 1/4 ಚಮಚ
ಜೀರಿಗೆ ಪುಡಿ-1/2 ಚಮಚ
ಧನಿಯ ಪುಡಿ - 1/2 ಚಮಚ
ಗೋಧಿ ಹಿಟ್ಟು - (2 ಚಪಾತಿಗೆ ಆಗುವಷ್ಟು)
ಉಪ್ಪು
ತುಪ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಚಿಕ್ಕದಾಗಿ ಹೆಚ್ಚಿದ ಶುಂಟಿ
 
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಹಾಕಿ ಚಪಾತಿಯ ಹದಕ್ಕೆ ಕಲಿಸಿ ಪಕ್ಕಕ್ಕಿಡಿ. ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಬೇಯಿಸಿ ಚೆನ್ನಾಗಿ ಪುಡಿ ಮಾಡಿಕೊಂಡಿರುವ ಆಲೂವನ್ನು ಅದಕ್ಕೆ ಹಾಕಿ ಅದಕ್ಕೆ ಅಚ್ಚ ಖಾರದ ಪುಡಿ, ಉಪ್ಪು, ಚಾಟ್ ಮಸಾಲಾ, ಜೀರಿಗೆ ಪುಡಿ ಮತ್ತು ಧನಿಯ ಪುಡಿ, ಅರಿಶಿಣ ಹಾಕಿ ಚಿಕ್ಕದಾಗಿ ಹೆಚ್ಚಿರುವ ಶುಂಟಿ ಮತ್ತು ಕೊತ್ತಂಬರಿ ಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ ಅದು ತಣ್ಣಗಾದ ಮೇಲೆ ಅದನ್ನು ಚಿಕ್ಕ ಚಿಕ್ಕ ಉಂಡೆಯಂತೆ ತಯಾರಿಸಿಕೊಳ್ಳಿ. ತದನಂತರ ಮೊದಲೇ ಕಲಿಸಿರುವ ಗೋಧಿ ಹಿಟ್ಟನ್ನು ಚಪಾತಿಗೆ ಸಿದ್ಧಪಡಿಸಿಕೊಳ್ಳುವಂತೆ ಸ್ವಲ್ಪ ಲಟ್ಟಿಸಿ ಅದಕ್ಕೆ ಹೂರಣವನ್ನು ಅದನ್ನು ಮಡಿಕೆ ಮಾಡಿ ಮತ್ತೊಮ್ಮೆ ಲಟ್ಟಿಸಿ ಅದು ಚಪಾತಿ ಗಾತ್ರಕ್ಕೆ ಒಂದ ಮೇಲೆ ತುಪ್ಪ ಇಲ್ಲವೇ ಎಣ್ಣೆಯನ್ನು ಸವರಿ ಕಾದ ಹಂಚಿನ ಮೇಲೆ ಎರಡು ಬದಿ ಬೇಯಿಸಿದರೆ ರುಚಿಕರವಾದ ಆಲೂ ಪರಾಟ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ