ವ್ಹಾವ್.. ಬೆಂಡೆಕಾಯಿ ದೋಸಾ ಸಖತ್ ಟೇಸ್ಟಿ..

ಬುಧವಾರ, 28 ಜೂನ್ 2017 (18:31 IST)
ಬೆಂಡೆಕಾಯಲ್ಲಿ ದೋಸಾ ಮಾಡ್ಬಹುದಾ ಅಂತ ಆಶ್ಚರ್ಯಾನಾ. ಖಂಡಿತಾ ಮಾಡ್ಬಹುದು. ತುಂಬಾನೇ ಸುಲಭ ಮತ್ತು ಸಖತ್ ರುಚಿ ಕೂಡ. ಮಾಮೂಲಿ ದೋಸೆಗಳನ್ನು ತೇಸ್ಟ್ ಮಾಡಿ ಬೆಜಾರಾದಾಗ ಒಮ್ಮೆ ಬೆಂಡೆಕಾಯಿ ದೋಸೆ ಮಾಡಿ ಟೇಸ್ಟ್ ಮಾಡಿ.

ಬೇಕಾಗುವ ಸಾಮಗ್ರಿಗಳು:
 
ಅಕ್ಕಿ-1/4 ಕೆಜಿ
 
ಬೆಂಡೆಕಾಯಿನ್-14 ಕೆಜಿ
 
ಉದ್ದಿನ ಬೇಳೆ 100 ಗ್ರಾಂ
 
ಹಸಿ ಮೆಣಸು 1-2
 
ಶುಂಠಿ- ಸ್ವಲ್ಪ
 
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
 
ಮಾಡುವ ವಿಧಾನ:
 
* ಮೊದಲಿಗೆ ಅಕ್ಕಿಯನ್ನು ತೊಳೆದು ಮೂರು ಗಂಟೆಗಳ ಕಾಲ ನೆನೆಹಾಕಿ.
 
* ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿ. ಬಳಿಕ ಬಾಣೆಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾದ ಬಳಿಕ ಕತ್ತರಿಸಿದ ಬೆಂಡೆ ಕಾಯಿ ಹಾಕಿ ಬಾಡಿಸಿಕೊಳ್ಳಿ. 
 
* ಈಗ ನೆನೆಹಾಕಿದ ಅಕ್ಕಿ, ಬಾಡಿಸಿಟ್ಟ ಬೆಂಡೆಕಾಯಿ, ಶುಂಠಿ, ಉಪ್ಪು ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. 
 
* ಬಳಿಕ ಕಾದ ತವದ ಮೇಲೆ ಒಂದು ಸೌಟ್ ಹಿಟ್ಟು ಹಾಕಿ ದೋಸೆ ಮಾಡಿ. ಬೇಕಿದ್ದರೆ ಎರಡೂ ಬದಿಯಲ್ಲೂ ಸ್ವಲ್ಪ ಎಣ್ಣೆ ಹಾಕಿ. ಬೆಂದ ಬಳಿಕ ಒಂದು ಪ್ಲೇಟ್ ಗೆ ಸರ್ವ್ ಮಾಡಿ. 
 
ಬೆಂಡೆಕಾಯಿ ದೋಸೆಯನ್ನು ಬೆಳ್ಳುಳಿ ಚಟ್ನಿ ಜತೆ ಸವಿದರೆ ತುಂಬಾ ರುಚಿಕರವಾಗಿರುತ್ತೆ. 
 

ವೆಬ್ದುನಿಯಾವನ್ನು ಓದಿ