ಮೂಲಂಗಿ ಸೊಪ್ಪಿನ ಪಲ್ಯ ತಿಂದು ಗಟ್ಟಿಯಾಗಿ

ಸೋಮವಾರ, 26 ಡಿಸೆಂಬರ್ 2016 (09:32 IST)
ಬೆಂಗಳೂರು: ಸಾಮಾನ್ಯವಾಗಿ ಮೂಲಂಗಿ ಜತೆ ಸೊಪ್ಪನ್ನು ನಾವು ಉಪಯೋಗಿಸುವುದೇ ಇಲ್ಲ. ಆದರೆ ನಿಜವಾಗಿಯೂ ಪೋಷಕಾಂಶವಿರುವುದು ಅದರ ಸೊಪ್ಪಿನಲ್ಲೇ ಎನ್ನುವುದನ್ನು ಮರೆಯಬಾರದು. ಮೂಲಂಗಿ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಿದ್ದು, ಅದನ್ನು ತಿನ್ನುವುದರಿಂದ ನಾವು ಗಟ್ಟಿಯಾಗುತ್ತೇವೆ. ಅದರ ಪಲ್ಯ ಚಪಾತಿ ಜತೆಗೆ ತಿನ್ನಲು ಬಹಳ ರುಚಿ. ಮಾಡುವ ವಿಧಾನ ಹೀಗಿದೆ.


ಬೇಕಾಗುವ ಸಾಮಗ್ರಿಗಳು
ಮೂಲಂಗಿ ಸೊಪ್ಪು
ಬೆಲ್ಲ
ಹುಣಸೆ ರಸ
ಈರುಳ್ಳಿ
ಹಸಿಮೆಣಸು
ಉಪ್ಪು
ಅರಸಿನ ಪುಡಿ
ಒಗ್ಗರಣೆ  ಸಾಮಾನು

ಮಾಡುವ ವಿಧಾನ

ಮೂಲಂಗಿ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು ಈರುಳ್ಳಿ, ಹಸಿಮೆಣಸು, ಮೂಲಂಗಿ ಸೊಪ್ಪನ್ನು ಅರಸಿನ ಪುಡಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದು ಚೆನ್ನಾಗಿ ಬಾಡಿದ ಮೇಲೆ ಸ್ವಲ್ಪ ಹುಣಸೆ ರಸ, ಬೆಲ್ಲ ಹಾಕಿಕೊಂಡು ಬೇಯಿಸಿ. ನಂತರ ಉಪ್ಪು ಹಾಕಿ ಕೆಳಗಿಳಿಸಿ. ರುಚಿಯಾದ ಮೂಲಂಗಿ ಸೊಪ್ಪಿನ ಪಲ್ಯ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ