ಮಂಗಳೂರಿನ ಕೆಲವು ಜನಪ್ರಿಯ ತಿನಿಸುಗಳು

ಅತಿಥಾ

ಗುರುವಾರ, 21 ಡಿಸೆಂಬರ್ 2017 (19:17 IST)
ನಿಮಗೆ ದಿನನಿತ್ಯ ಒಂದೇ ರೀತಿಯ ತಿನಿಸುಗಳನ್ನು ತಿಂದು ಬೇಜಾರ್ ಆಗಿದೆಯೇ ಬೇರೆ ರೀತಿಯ ತಿನಿಸುಗಳನ್ನು ತಯಾರಿಸುವ ಮನಸ್ಸಾಗಿದೆಯೇ ನಿಮಗೆ ಮಂಗಳೂರಿನ ಕೆಲವು ಜನಪ್ರಿಯ ತಿನಿಸುಗಳನ್ನು ಹೇಗೆ ಮಾಡೋದು ಅಂತಾ ನಾವ್ ಹೇಳತೀವಿ ಒಮ್ಮೆ ಪ್ರಯತ್ನಿಸಿ.








2. 
1. ಮಂಗಳೂರು ಗೋಳಿ ಬಜೆ 
 
ಬೇಕಾಗುವ ಸಾಮಗ್ರಿ
 
1 ಕಪ್ ಮೈದಾ ಹಿಟ್ಟು
1 ರಿಂದ 1½ ಕಪ್ ಮೊಸರು
ಅಡುಗೆ ಸೋಡಾ
1-2 ಚಮಚ ಸಕ್ಕರೆ
1½ ಚಮಚ ಉಪ್ಪು
ಎಣ್ಣೆ
ಚಿಕ್ಕದಾಗಿ ಹೆಚ್ಚಿದ 1 ಇಂಚು ಶುಂಠಿ
2 ಸಣ್ಣದಾಗಿ ಹೆಚ್ಚಿದ ಹಸಿಮೆಣಸು
2 ರಿಂದ 3 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
 
ಮಾಡುವ ವಿಧಾನ:
 
ಒಂದು ಪಾತ್ರೆಯಲ್ಲಿ ಮೈದಾ, ಉಪ್ಪು, ಸಕ್ಕರೆ ಮತ್ತು ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ 1 ಕಪ್ ಮೊಸರು ಸೇರಿಸಿ, ನಂತರ ಚೆನ್ನಾಗಿ ಕಲಿಸಿರಿ ಒಂದು ವೇಳೆ ಹಿಟ್ಟಿಗೆ ನೀರು ಜಾಸ್ತಿಯಾದರೆ ಅದಕ್ಕೆ ಸ್ವಲ್ಪ ರವಾ ಅಥವಾ ಮೈದಾವನ್ನು ಸೇರಿಸಬಹುದು ನಂತರ ಅದಕ್ಕೆ ಹೆಚ್ಚಿದ ಶುಂಠಿ, ಕೊತ್ತಂಬರಿ, ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.  ಆ ಮಿಶ್ರಣ ಮಾಡಿರುವ ಹಿಟ್ಟನ್ನು ಕನಿಷ್ಟ ಒಂದು ಗಂಟೆಗಳ ಕಾಲ ಮುಚ್ಚಿಡಿ. ನೀವು ಅದನ್ನು 3 ರಿಂದ 6 ಗಂಟೆಗಳವರೆಗೆ ಇರಿಸಿದರೆ ಅದು ಇನ್ನು ರುಚಿಕರವಾಗಿರುತ್ತದೆ.ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಕಾದ ಎಣ್ಣೆಗೆ ಚಮಚದ ಸಹಾಯದಿಂದ ಹಿಟ್ಟನ್ನು ಹಾಕಿ ಅದು ಕಂದು ಬಣ್ಣ ಬರುವವರೆಗೆ ಕರಿದು ತೆಗೆದರೆ ಮಂಗಳೂರು ಗೋಳಿ ಬಜೆ ಸವಿಯಲು ಸಿದ್ಧ. 
 
2. ಮಂಗಳೂರು ಬನ್ಸ್
 
ಬೇಕಾಗುವ ಸಾಮಗ್ರಿ
 
1-2 ಬಾಳೆಹಣ್ಣು
1 ಕಪ್ ಮೈದಾ ಹಿಟ್ಟು
4 ಚಮಚ ಸಕ್ಕರೆ
4 ಚಮಚ ಮೊಸರು
ಉಪ್ಪು
1/2 ಚಮಚ ಜೀರಿಗೆ
ಎಣ್ಣೆ
 
ಮಾಡುವ ವಿಧಾನ
 
ಬಾಳೆಹಣ್ಣಿನ ಸಿಪ್ಪೆ ತೆಗೆದು ಸಣ್ಣ ಪಾತ್ರೆಯೊಂದರಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಮಿಶ್ರಣಕ್ಕೆ ಮೊಸರು, ಸಕ್ಕರೆ, ಉಪ್ಪು, ಜೀರಿಗೆ ಹಾಕಿ ಚೆನ್ನಾಗಿ ಕಲಿಸಬೇಕು ನಂತರ ಅದಕ್ಕೆ ಮೈದಾಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟು ತಯಾರು ಮಾಡಿಕೊಳ್ಳಿ. ನಂತರ ಕಲಸಿದ ಹಿಟ್ಟನ್ನು 8 ರಿಂದ 10 ಗಂಟೆಗಳ ಒಂದು ಕವರಿನಲ್ಲಿ ಹಾಕಿ ಮುಚ್ಚಿಡಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ನಿಂಬೆಗಾತ್ರಕ್ಕೆ ಹಿಟ್ಟನ್ನು ಉಂಡೆ ಮಾಡಿ ಪೂರಿಯಂತೆ ಲಟ್ಟಿಸಿ. ನಂತರ ಅದನ್ನು ಕಾದ ಎಣ್ಣೆಯಲ್ಲಿ ಹಾಕಿ ಎರಡು ಬದಿಯಲ್ಲಿ ಕಂದು ಬಣ್ಣ ಬರುವರೆಗೆ ಕರಿದು ತೆಗೆದರೆ ರುಚಿಕರವಾದ ಮಂಗಳೂರು ಬನ್ಸ್ ಸವಿಯಲು ಸಿದ್ಧ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ