ತರಕಾರಿ ಫ್ರೆಶ್ ಆಗಿ ಇಡಲು ಟಿಪ್ಸ್

ಮಂಗಳವಾರ, 16 ಮೇ 2017 (08:59 IST)
ಬೆಂಗಳೂರು: ಮಾರುಕಟ್ಟೆಯಿಂದ ಮನೆಗೆ ಕೆಜಿಗಟ್ಟಲೆ ತರಕಾರಿ ತಂದರೆ ಅದನ್ನು ಫ್ರೆಶ್ ಆಗಿ ಶೇಕರಿಸಿಡುವ ತಲೆ ಬಿಸಿ. ಅದನ್ನು ಹಾಳಾಗದಂತೆ ಶೇಖರಿಸುವುದು ಹೇಗೆ?

 
ತರಕಾರಿ ಮನೆಗೆ ತಂದ ಕೂಡಲೇ ರೆಫ್ರಿಜರೇಟರ್ ನಲ್ಲಿ ಇಡಬೇಡಿ. ತೊಳೆದು ನೀರು ಸಂಪೂರ್ಣವಾಗಿ ಆರಿದ ಮೇಲೆ ಇಟ್ಟರೆ ಒಳ್ಳೆಯದು. ಒಂದು ವೇಳೆ ತೊಳೆಯಲು ಸಮಯವಿಲ್ಲದಿದ್ದರೆ, ಗಾಳಿಯಾಡದ ಕವರ್ ನಲ್ಲಿಡಿ.

ಮಾರುಕಟ್ಟೆಯಿಂದ ತಂದ ತರಕಾರಿಗಳನ್ನು 10 ನಿಮಿಷ ನೀರಿನಲ್ಲಿ ನೆನೆಸಿ ಆ ನಂತರ ಫ್ರಿಜ್ ನಲ್ಲಿಡಿ. ನಂತರ ಇನ್ನೊಮ್ಮೆ ತೊಳೆದುಕೊಂಡು ಬಳಸಿ. ಆಲೂಗಡ್ಡೆಯನ್ನು ತೊಳೆದುಕೊಂಡು, ಗಾಳಿಯಾಡದ ಕವರ್ ನಲ್ಲಿ ಸುತ್ತಿಡಿ. ಆದರೆ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿಡಬೇಡಿ.

ಬದನೆ, ಬೀನ್ಸ್, ಟೊಮೆಟೋನಂತಹ ತರಕಾರಿಗಳನ್ನು 10 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ ಉಷ್ಣತೆಯಲ್ಲಿ ಶೇಖರಿಸಿಡಿ. ಕ್ಯಾಬೇಜ್, ಕಾಲಿಫ್ಲವರ್ ನಂತಹ ತರಕಾರಿಗಳನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳದುಕೊಂಡು ನಂತರವೇ ಬಳಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ