ಉಪ್ಪು- ಚಿಟಕಿ
ಅರಿಶಿನ- ಕಾಲು ಚಮಚ
ಮಾಡುವ ವಿಧಾನ:
ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದರಲ್ಲಿ ಮೈದಾ ಹಿಟ್ಟನ್ನು ಹಾಕಿ ಅದಕ್ಕೆ ಚಿಟಕಿ ಉಪ್ಪು, ಅರಿಶಿನ ಹಾಕಿ 4 ರಿಂದ 5 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅರ್ಧ ಲೋಟ ನೀರು ಹಾಕಿ ಎಲ್ಲವನ್ನು ಚೆನ್ನಾಗಿ ಲಟ್ಟಿಸಲು ಹದವಾಗುವ ರೀತಿಯಲ್ಲಿ ಕಲೆಸಿ ಅದನ್ನು ಅದೇ ಪಾತ್ರೆಯಲ್ಲಿ ಹಾಕಿ ಸುಮಾರು ಅರ್ಧ ಗಂಟೆಯವರೆಗೆ ಮುಚ್ಚಿಡಿ. ನಂತರ ಗೆಣಸನ್ನು ನೀರಿನಲ್ಲಿ ತೊಳೆದು ಅದನ್ನು ಕುಕ್ಕರ್ ಇಲ್ಲವೇ ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಬೇಯಿಸಿ ಅದು ತಂಪಾದ ಮೇಲೆ ಅದರ ಸಿಪ್ಪೆಯನ್ನು ತೆಗೆದು ಚೆನ್ನಾಗಿ ನುರಿದು ಮಿಕ್ಸಿಯಲ್ಲಿ ಹಾಕಿ ತಿರುಗಿಸಿ ಅದನ್ನು ಇನ್ನೊಂದು ಪಾತ್ರೆಯಲ್ಲಿ ತೆಗೆದಿಡಿ
ನಂತರ ತೆಂಗಿನ ಕಾಯಿ ತುರಿ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ಮಿಕ್ಸಿಗೆ ಹಾರಿ ನುಣ್ಣಗೆ ರುಬ್ಬಿರಿ ರುಬ್ಬುವಾಗ ನೀರನ್ನು ಹಾಕದಿರಿ. ನಂತರ ಗ್ಯಾಸ್ ಹಚ್ಚಿ ಒಂದು ದಪ್ಪ ತಳದ ಫ್ಯಾನ್ ಇರಿಸಿ ಅದು ಕಾದ ಬಳಿಕ 1 ಚಮಚ ತುಪ್ಪವನ್ನು ಹಾಕಿರಿ ಅದಕ್ಕೆ ಬೆಲ್ಲ-ಕಾಯಿಯನ್ನು ರುಬ್ಬಿದ ಭಾಗವನ್ನು ಹಾಕಿ ಕೈಯಾಡಿಸಿ. ನಂತರ ರುಬ್ಬಿದ ಗೆಣಸಿನ ಭಾಗವನ್ನು ಹಾಕಿ ಚೆನ್ನಾಗಿ ಮಗುಚುತ್ತಿರಿ. ಉರಿ ಸಣ್ಣಗೇ ಇರಲಿ. ಬೆಲ್ಲ-ಕಾಯಿಯ ನೀರಿನಂಶವೆಲ್ಲಾ ಹೋಗಿ, ಅದು ಗಟ್ಟಿಯಾಗಿ ಹೂರಣದ ಹದ ಬಂದಾಗ ಸ್ಟವ್ ಆರಿಸಿ. ಈಗ ಹೂರಣವೂ ಸಿದ್ಧವಾಗಿದೆ.
ನಂತರ ಮೊದಲೇ ತಯಾರಿಸಿದ ಹಿಟ್ಟನ್ನು ಲಿಂಬೆ ಗ್ರಾತ್ರದಲ್ಲಿ ಉಂಡೆ ಮಾಡಿ ಅದನ್ನು ಲಟ್ಟಿಸಿ ನಂತರ ಅದರಲ್ಲಿ ಈ ಹುರಣದ ಉಂಡೆಯನ್ನು ಇಟ್ಟು ಮಡಚಿ ಎರಡು ಬದಿಯಲ್ಲಿ ಹಿಟ್ಟನ್ನು ತಾಗಿಸಿ ಅದನ್ನು ಲಟ್ಟಿಸಿ. ನಂತರ ಫ್ಯಾನ್ ತೆಗೆದುಕೊಳ್ಳಿ ಅದು ಕಾದ ಮೇಲೆ ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಲಟ್ಟಿಸಿದ ಹಿಟ್ಟನ್ನು ಹಾಕಿ ಎರಡು ಕಡೆಯಲ್ಲಿ ಬೇಯಿಸಿದರೆ ಆರೋಗ್ಯಕರವಾದ ರುಚಿಯಾದ ಗೆಣಸಿನ ಹೋಳಿಗೆ ಸವಿಯಲು ಸಿದ್ಧ.