ರುಚಿಯಾದ ಹಯಗ್ರೀವ ಮಾಡಿ ಸವಿಯಿರಿ

ಬುಧವಾರ, 14 ಫೆಬ್ರವರಿ 2018 (13:21 IST)
ಬೆಂಗಳೂರು: ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ.

ಸಾಮಗ್ರಿಗಳು:
1. ಕಡಲೆ ಬೇಳೆ -                          1/2 ಕಪ್
2. ತೆಂಗಿನ ತುರಿ -                         1 ಕಪ್
3. ಬೆಲ್ಲ -                                    1/2 ಕಪ್
4. ತುಪ್ಪ -                                   5 ಸ್ಪೂನ್
5. ಗೋಡಂಬಿ, ದ್ರಾಕ್ಷಿ -                    ಸ್ವಲ್ಪ
6. ಏಲಕ್ಕಿ ಪುಡಿ -                            ಸ್ವಲ್ಪ
7. ಪಚ್ಚ ಕರ್ಪೂರ -                         ಸ್ವಲ್ಪ
8. ಕೇಸರಿ ಬಣ್ಣ -                            ಸ್ವಲ್ಪ
9. ಜಾಯಿಕಾಯಿ ಪುಡಿ -                    ಸ್ವಲ್ಪ
10. ಜಾಪತ್ರೆ ಪುಡಿ -                        ಸ್ವಲ್ಪ

ಮಾಡುವ ವಿಧಾನ
ಕಡಲೆ ಬೇಳೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಬೆಂದ ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ, ಒಂದು ಕಪ್ ನೀರು, ಬೆಲ್ಲ, ತೆಂಗಿನ ತುರಿ, ಕೇಸರಿ ಬಣ್ಣ ಸೇರಿಸಿ ಚೆನ್ನಾಗಿ ಕುದಿಸಿ. ಆಮೇಲೆ ಜಾಯಿಕಾಯಿ ಪುಡಿ ಹಾಗೂ ಜಾಪತ್ರೆ ಪುಡಿಗಳನ್ನು ಹಾಕಿ ಸ್ವಲ್ಪ ಹೊತ್ತು ಮೊಗಚುತ್ತಿರಿ. ಕೊನೆಗೆ ಗೋಡಂಬಿ ದ್ರಾಕ್ಷಿ ಸೇರಿಸಿದರೆ ಹಯಗ್ರೀವ ಸವಿಯಲು ಸಿದ್ಧ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ