ರುಚಿಯಾದ ಹಾಲುಬಾಯಿ ಮಾಡುವುದು ಹೇಗೆ ಗೊತ್ತಾ...?

ಮಂಗಳವಾರ, 13 ಫೆಬ್ರವರಿ 2018 (10:32 IST)
ಬೆಂಗಳೂರು: ಬಾಯಲ್ಲಿ ಕರಗುವಂತಹ ಸಿಹಿಯಾದ ಹಾಲು ಬಾಯಿ ಮಾಡುವುದು ಬಹಳ ಸುಲಭ! ಅತಿ ಹೆಚ್ಚು ಪೋಷಕಾಂಶಗಳಿರುವ ಈ ಹಾಲುಬಾಯಿ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ಖಾದ್ಯ.


ಬೇಕಾಗುವ ಸಾಮಾಗ್ರಿಗಳು
1. ನೆನೆಸಿದ ಅಕ್ಕಿ -          1/2 ಕಪ್
2. ಬೆಲ್ಲ -                      1 ಕಪ್
3. ತೆಂಗಿನ ತುರಿ -           1/4 ಕಪ್
4. ಏಲಕ್ಕಿ ಪುಡಿ -             ಸ್ವಲ್ಪ
5. ಉಪ್ಪು -                    ಚಿಟಿಕೆ
6. ತುಪ್ಪ -                     2 ಚಮಚ

ಮಾಡುವ ವಿಧಾನ: ಬೆಲ್ಲಕ್ಕೆ 1/2 ಕಪ್ ನೀರು ಸೇರಿಸಿ ಒಂಡು ಬಾಣಲೆಯಲ್ಲಿ ಕುದಿಸಿ. ನೆನೆಸಿದ ಅಕ್ಕಿ, ತೆಂಗಿನ ತುರಿ, ಚಿಟಿಕೆ ಉಪ್ಪು, 1/2 ಕಪ್ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. 
ರುಬ್ಬಿದ ಮಿಶ್ರಣವನ್ನು ಕುದಿಯುತ್ತಿರುವ ಬೆಲ್ಲಕ್ಕೆ ಹಾಕಿ ತಳ ಬಿಡುವವರೆಗೆ ಕುದಿಸಿ ಒಂದು ಸ್ಪೂನ್ ತುಪ್ಪ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ, ತುಪ್ಪ ಸವರಿದ ತಟ್ಟೆಗೆ ಹಾಕಿ ಒಂದು ಗಂಟೆಯ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ  ಹಾಲು ಬಾಯಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ