ರುಚಿ ರುಚಿಯಾದ ಮಾವಿನಕಾಯಿಯ ಚಿತ್ರಾನ್ನ

ಗುರುವಾರ, 11 ಜನವರಿ 2018 (11:26 IST)
ಬೆಂಗಳೂರು : ಬೆಳಿಗ್ಗೆ ಟಿಪನ್ ಗೆ ಯಾವ ತಿಂಡಿ ಮಾಡುವುದು ಎಂಬ ಚಿಂತೆ ಎಲ್ಲಾ ಗೃಹಿಣಿಯವರಿಗೂ ಇದ್ದೆಇರುತ್ತೆ. ಅದಕ್ಕಾಗಿ ಸುಲಭವಾಗಿ ಬೇಗ ತಯಾರಾಗುವಂತ ಮಾವಿನಕಾಯಿ ಚಿತ್ರಾನ್ನವನ್ನು ಮಾಡಿ. ತಿನ್ನಲು ಬಹಳ  ರುಚಿಯಾಗಿರುತ್ತದೆ.


ಬೇಕಾಗಿರುವ ಸಾಮಾಗ್ರಿಗಳು :
1 ಕಪ್ ಅನ್ನ, 1 ಮಾವಿನ ಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬ್ಬರಿ ಸೋಪ್ಪು, ½ ಕಪ್ ಶೇಂಗಾ ಕಾಳು, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಹಸಿಮೆಣಸಿನಕಾಯಿ(ಖಾರಕ್ಕೆ ಬೇಕಾಗುವಷ್ಟು), ಉಪ್ಪು, 1 ಚಮಚ ಸಾಸಿವೆ, 1 ಚಮಚ ಜೀರಿಗೆ, 1ಚಮಚ ಅರಶಿನ, 2 ಚಮಚ ಎಣ್ಣೆ.


ಮಾಡುವ ವಿಧಾನ :
ಮೊದಲಿಗೆ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಗು ಜೀರಿಗೆಯನ್ನು ಹಾಕಿ. ನಂತರ ಅದಕ್ಕೆ ಶೇಂಗಾ ಕಾಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಅದಕ್ಕೆ ಸ್ವಲ್ಪ ಕರಿಬೇವು, ಈರುಳ್ಳಿ ಹಾಕಿ ಫ್ರೈ ಮಾಡಿ. ಈರುಳ್ಳಿ ಕೆಂಪಾದ ಮೇಲೆ ಹಸಿಮೆಣನಸಿನ ಕಾಯಿ, ಅರಶಿನ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ನಂತರ ಸ್ವಲ್ಪ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ ಅದಕ್ಕೆ ಅನ್ನ ಹಾಗು ತುರಿದ ಮಾವಿನಕಾಯಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಿಸಿ ಮಾಡಿ ನಂತರ ಕೊತ್ತಂಬ್ಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ಮಾವಿನಕಾಯಿ ಚಿತ್ರಾನ್ನ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ