ಎಳೆಯ ತೆಂಗಿನ ಕಾಯಿ ದೋಸೆ ಮಾಡಿ

ಗುರುವಾರ, 22 ಡಿಸೆಂಬರ್ 2016 (11:53 IST)
ಬೆಂಗಳೂರು: ಎಳೆನೀರು ಕುಡಿದ ಮೇಲೆ ಕೆಲವರಿಗೆ ಗಂಜಿ ಕುಡಿಯಲು ಇಷ್ಟವಿರಲ್ಲ. ಕೆಲವರಿಗೆ ಅದು ಅಜೀರ್ಣವಾಗುತ್ತದೆ ಎನ್ನುವ ಭಯವೂ ಇದೆ. ಹಾಗಿದ್ದರೆ, ಅದನ್ನು ದೋಸೆ ಮಾಡಿ ತಿನ್ನಬಹುದು. ಅದು ರುಚಿಕರವೂ ಆಗಿರುತ್ತದೆ.


ಬೇಕಾಗುವ ಸಾಮಗ್ರಿಗಳು

ಎಳೆಯ ತೆಂಗಿನ ಕಾಯಿ
ಬೆಳ್ತಿಗೆ ಅಕ್ಕಿ
ಉಪ್ಪು

ಮಾಡುವ ವಿಧಾನ

ಬೆಳ್ತಿಗೆ ಅಕ್ಕಿಯನ್ನು ನೆನೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಎಳೆಯ ತೆಂಗಿನ ಕಾಯಿ ತಿರುಳನ್ನು ಸೇರಿಸಿ ಮತ್ತೆ ರುಬ್ಬಿ. ಇದು ನುಣ್ಣಗೆ ಆಗುವವರೆಗೂ ರುಬ್ಬಿಕೊಳ್ಳಿ. ನಂತರ ಕಾದ ಕಾವಲಿ ಮೇಲೆ ಸ್ವಲ್ಪವೇ ಎಣ್ಣೆ ಸವರಿಕೊಂಡು ದೋಸೆ ಹುಯ್ಯಿರಿ. ಎಳೆಯ ತೆಂಗಿನ ಕಾಯಿ ಕೊಡುವ ಘಮ ನಿಮ್ಮ ಬಾಯಲ್ಲಿ ನೀರೂರಿಸಬಹುದು. ಕಾಯಿ ಚಟ್ನಿಯೊಂದಿಗೆ ತಿನ್ನಲು ರುಚಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ