ಮಜ್ಜಿಗೆ ಉಳಿದರೆ ದೋಸೆ ಮಾಡಿ

ಶನಿವಾರ, 17 ಡಿಸೆಂಬರ್ 2016 (10:31 IST)
ಬೆಂಗಳೂರು: ಮಜ್ಜಿಗೆ ಉಳಿದರೆ ಏನು ಮಾಡೋದು ಎಂದು ತಲೆಬಿಸಿ ಮಾಡಿಕೊಳ್ಳುವವರಿಗೆ ಒಂದು ರೆಸಿಪಿ ಇಲ್ಲಿದೆ. ಸ್ವಲ್ಪ ಅವಲಕ್ಕಿ, ಅಕ್ಕಿ ಸೇರಿಸಿಕೊಂಡು ದೋಸೆ ಹಿಟ್ಟು ಮಾಡಿದರೆ ರುಚಿಯಾದ ದೋಸೆ ಮಾಡಿಕೊಂಡು ತಿನ್ನಬಹುದು.

ಬೇಕಾಗುವ ಸಾಮಗ್ರಿಗಳು:

ಅವಲಕ್ಕಿ
ಬೆಳ್ತಿಗೆ ಅಕ್ಕಿ
ಮಜ್ಜಿಗೆ
ಉಪ್ಪು

ಮಾಡುವ ವಿಧಾನ

ಅಕ್ಕಿಯನ್ನು ನೆನೆ ಹಾಕಿ. ನೆನೆದ ಅಕ್ಕಿಗೆ ಸ್ವಲ್ಪ ಮಜ್ಜಿಗೆ, ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಮಜ್ಜಿಗೆ ಜಾಸ್ತಿ ಸುರಿದರೆ, ದೋಸೆಗೆ ಹುಳಿ ರುಚಿ ಜಾಸ್ತಿಯಾಗಿ ತಿನ್ನಲು ಕಷ್ಟವಾಗಬಹುದು. ಅಕ್ಕಿ ರುಬ್ಬಿದ ಮೇಲೆ ಇದೇ ಹಿಟ್ಟಿಗೆ ಒಂದು ಕಪ್ ನಷ್ಟು ಅವಲಕ್ಕಿ ಸೇರಿಸಿಕೊಂಡು ನುಣ್ಣಗೆ ರುಬ್ಬಿ. ಈ ಹಿಟ್ಟನ್ನು ಉಪ್ಪು ಹಾಕಿ ಕೆಲವು ಗಂಟೆ ಹುಳಿ ಬರಲು ಇಡಿ. ನಂತರ ಕಾದ ಕಾವಲಿ ಮೇಲೆ ಸ್ವಲ್ಪವೇ ಎಣ್ಣೆ ಹಾಕಿಕೊಂಡು ಹುಯ್ಯಿರಿ. ದೋಸೆ ಹಿಟ್ಟು ತುಂಬಾ ತೆಳ್ಳಗೆ ಮಾಡಬೇಡಿ. ಉದ್ದಿನ ಹಿಟ್ಟಿನಷ್ಟು ದಪ್ಪಕ್ಕಿರಲಿ. ಇದು ಉದ್ದಿನ ದೋಸೆಯಂತೆ ತಿನ್ನಲು ಬಹಳ ರುಚಿ. ಖರ್ಚೂ ಕಡಿಮೆ. ಅವಲಕ್ಕಿ ಹಾಕುವುದರಿಂದ ಮೃದುವಾಗಿಯೂ, ಗರಿ ಗರಿಯಾಗಿಯೂ ಇರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ